ಉಳ್ಳಾಲ: ಕನಕದಾಸರು ಶ್ರಮ ಸಂಸ್ಕೃತಿಯ ಪ್ರತಿನಿಧಿ. ಕೀರ್ತನೆ ಮೂಲಕ ಸಮಾಜ ಸರಿ ದಾರಿಯತ್ತ ಸಾಗುವಲ್ಲಿ ಪ್ರೇರೇಪಿಸಿದವರು. ಕನಕರ ಚಿಂತನೆ ಸರ್ವಕಾಲಕ್ಕೂ ಪ್ರಸ್ತುತ ಎಂದು ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ ಪೆಥಾಲಜಿ ವಿಭಾಗದ ಪ್ರಧ್ಯಾಪಕ ಡಾ.ಕಿಶನ್ ಪ್ರಸಾದ್ ಎಚ್.ಎಲ್.ಹೇಳಿದರು.
ನಿಟ್ಟೆ ವಿಶ್ವವಿದ್ಯಾಲಯದ ವತಿಯಿಂದ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ ಮತ್ತು ಡಾ.ಕೆ.ಆರ್.ಶೆಟ್ಟಿ ತುಳು ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಕನಕ ಜಯಂತಿ ಆಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ಅನಘಾ, ಕನಕದಾಸರು ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಮಾಹಿತಿ ನೀಡಿದರು. ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ ಅನಾಟಮಿ ವಿಭಾಗದ ಪ್ರಾಧ್ಯಾಪಕಿ ಡಾ.ಸ್ವಾತಿ ಶೆಟ್ಟಿ, ಮಾನವಿಕ ವಿಭಾಗದ ಉಪನ್ಯಾಸಕ ದಿನೇಶ್ ಕುಮಾರ್ ಶೆಟ್ಟಿ, ತುಳು ಅಧ್ಯಯನ ಕೇಂದ್ರದ ಅನುವಾದಕರ ತಂಡದ ಸದಸ್ಯೆ ವಿಜಯಲಕ್ಷ್ಮೀ ಕಟೀಲು ಉಪಸ್ಥಿತರಿದ್ದರು.
ವಿದ್ಯಾರ್ಥಿ ಸತ್ಯಂ ಸ್ವಾಗತಿಸಿದರು. ಡಾ.ಸಾಯಿಗೀತಾ ಹೆಗ್ಡೆ ವಂದಿಸಿದರು. ಸಿವನೇಸನ್ ಮತ್ತು ಸುಧನ್ವ ಕಾರ್ಯಕ್ರಮ ನಿರೂಪಿಸಿದರು.