ಕಡಬ-ಪಂಜ ರಸ್ತೆಯ ಕಡಬದಿಂದ ಓಂತ್ರಡ್ಕವರೆಗಿನ ಅಭಿವೃದ್ಧಿ ಕಾಮಗಾರಿಯನ್ನು ಶಾಸಕಿ ಭಾಗೀರಥಿ ಮುರುಳ್ಯ ವೀಕ್ಷಿಸಿದರು. 
ದಕ್ಷಿಣ ಕನ್ನಡ

ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲಿ : ಶಾಸಕಿ ಭಾಗೀರಥಿ ಮುರುಳ್ಯ ಸೂಚನೆ

ಸೌಮ್ಯ ಆರ್
ಲೋಕೋಪಯೋಗಿ ಇಲಾಖಾ ಸುಳ್ಯ ವಿಭಾಗ ಎಇಇ ಗೋಪಾಲ್ ಶಾಸಕರಿಗೆ ಪೂರಕ ಮಾಹಿತಿ ನೀಡಿದರು. ಕಡಬ ಬಿಜೆಪಿ ಶಕ್ತಿಕೇಂದ್ರ ಅಧ್ಯಕ್ಷ ಪ್ರಕಾಶ್ ಎನ್.ಕೆ., ಕಡಬ ಪ.ಪಂ ಸದಸ್ಯರಾದ ದಯಾನಂದ ಗೌಡ ಪೊಯ್ಯೆತ್ತಡ್ಡ, ಅಕ್ಷತಾ ಬಾಲಕೃಷ್ಣ, ಕಡಬ ಸಿ.ಎ.ಬ್ಯಾಂಕ್ ನಿರ್ದೇಶಕರಾದ ಸದಾನಂದ ಪಿ., ಪುರುಷೋತ್ತಮ, ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್, ಕಡಬ ಗ್ರಾಪಂ ಮಾಜಿ ಸದಸ್ಯ ಆದಂ ಕುಂಡೋಳಿ, ಕಡಬ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಮಂಜುನಾಥ್, ಗುತ್ತಿಗೆದಾರ ಮನ್ವಿಜ್ ಶೆಟ್ಟಿ ಪುತ್ತೂರು ಮೊದಲಾವರು ಇದ್ದರು.

ಬಿಡುಗಡೆಯಾಗಿರುವ 1 ಕೋಟಿ ರೂ. ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದ್ದು, ಈಗಾಗಲೇ ಕಡಬ ಭಾಗದಿಂದ ಕಲ್ಲಂತಡ್ಕ ತನಕ ರಸ್ತೆ ಹೆಚ್ಚು ಹಾಳಾಗಿರುವ 3 ಕಡೆ ರಸ್ತೆ ಎತ್ತರಿಸಿ ಕಾಂಕ್ರೀಟ್ ಹಾಕಲಾಗಿದೆ. ಕಾಂಕ್ರೀಟ್ ಹಾಕಿದಲ್ಲಿಗೆ ಸರಿಯಾಗಿ ರಸ್ತೆ ಎತ್ತರಿಸಿ ಡಾಂಬರ್ ಹಾಕುವ ಕೆಲಸ ತಕ್ಷಣ ಪ್ರಾರಂಭಿಸಲು ಲೋಕೋಪಯೋಗಿ ಇಲಾಖಾಧಿಕಾರಿ ಹಾಗೂ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಓಂತ್ರಡ್ಕದಿಂದ ಪಂಜದ ತನಕ ಈಗಾಗಲೇ ಲೋಕೋಪಯೋಗಿ ಇಲಾಖೆ ಮೂಲಕ ನಿರ್ವಹಣಾ ಅನುದಾನದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಿ ತೇಪೆ ಕಾರ್ಯ ನಡೆಸಲಾಗಿದೆ.