ವಿಜಯವಾಣಿ ಸುದ್ದಿಜಾಲ ಗುರುಪುರ
ಗುರುಪುರ ಶ್ರೀ ನೀಲಕಂಠೇಶ್ವರ ದೇವಸ್ಥಾನ ಶ್ರೀ ಜಂಗಮ ಸಂಸ್ಥಾನ ಮಠ 4.5 ಕೋಟಿ ರೂ. ವೆಚ್ಚದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು, ಮುಂಬೈ ಸಮಿತಿಯಿಂದ ಬಹಳಷ್ಟು ನೆರವು ನಿರೀಕ್ಷಿಸಿದ್ದೇವೆ ಎಂದು ಶಾಸಕ ಡಾ.ಭರತ್ ಶೆಟ್ಟಿ ಹೇಳಿದರು.
ಜೀರ್ಣೋದ್ಧಾರ ಕಾರ್ಯದ ಪ್ರಯುಕ್ತ ಶನಿವಾರ ಮುಂಬೈ ಸದ್ಭಕ್ತರ ಸಮಕ್ಷಮದಲ್ಲಿ ಮುಂಬೈ ಸಮಿತಿಯ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ದೇವಾಡಿಗ ವಿಶ್ವ ಮಹಾ ಮಂಡಳ ಅಧ್ಯಕ್ಷ ಧರ್ಮಪಾಲ ದೇವಾಡಿಗ, ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ ಸಂಸ್ಥಾಪಕ ತೋನ್ಸೆ ಜಯ ಕೃಷ್ಣ ಎ.ಶೆಟ್ಟಿ, ಮುಂಬೈ ೆರ್ಟಿನ ಶ್ರೀ ಭುವನೇಶ್ವರಿ ಸೇವಾ ಸಮಿತಿ ಸಂಸ್ಥಾಪಕ ರಾಜೇಶ್ ಭಟ್ ಮಾತನಾಡಿದರು. ಗುರುಪುರ ಶ್ರೀ ಜಂಗಮ ಮಠದ ಶ್ರೀ ಶ್ರೀ ರುದ್ರಮುನಿ ಮಹಾ ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಕಾಂತ್ ಶೆಟ್ಟಿ ಕಾರ್ಕಳ ವಿರಚಿತ ಶ್ರೀ ಜಂಗಮ ಮಠದ ಇತಿಹಾಸ ಮಾಹಿತಿ ಒಳಗೊಂಡ ಸಾಕ್ಷೃಚಿತ್ರ ಅನಾವರಣಗೊಳಿಸಲಾಯಿತು.
ಗುರುಪುರ ಶ್ರೀ ನೀಲಕಂಠೇಶ್ವರ ದೇವಸ್ಥಾನ ಜೀರ್ಣೋದ್ಧಾರದ ಮುಂಬೈ ಸಮಿತಿ ಅಧ್ಯಕ್ಷ ಮೋಹನದಾಸ್ ಶೆಟ್ಟಿ ಗುರುಪುರ, ಮುಂಬೈ ಸಮಿತಿ ಉಪಾಧ್ಯಕ್ಷ, ಉದ್ಯಮಿಗಳಾದ ಸತೀಶ್ ಚೌಟ ಗುರುಪುರ, ಸತೀಶ್ ಎಂ.ಶೆಟ್ಟಿ ಪನ್ವೇಲ್, ಕಾರ್ಯದರ್ಶಿ ಉಷಾ ಎ.ಶೆಟ್ಟಿ ಕಾರಮೊಗರುಗುತ್ತು, ಸಮಿತಿ ಇತರ ಪದಾಧಿಕಾರಿಗಳು, ಸದಸ್ಯರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು, ಸರ್ವ ಸದಸ್ಯರು ಉಪಸ್ಥಿತರಿದ್ದರು. ಗುರುಪುರ ಹರೀಶ್ ಶೆಟ್ಟಿ ತೋಕಾಲ ಮಾಣಿ ಸಾಗು ಹೊಸಮನೆ ಸ್ವಾಗತಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಚಿನ್ ಅಡಪ ಗುರುಪುರ ವಂದಿಸಿದರು. ಮುಂಬೈ ಕನ್ನಡ ಭವನ ಪಿಯು ಕಾಲೇಜು ಪ್ರಾಂಶುಪಾಲೆ ಅಮೃತಾ ಎ.ಶೆಟ್ಟಿ ನಿರೂಪಿಸಿದರು.