ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶಿಕ್ಷಕ-ರಕ್ಷಕ ಸಭೆಯಲ್ಲಿ ಪ್ರಾಂಶುಪಾಲ ರವಿರಾಜ್ ವಾತನಾಡಿದರು. ಹರಿಪ್ರಸಾದ್ ಬಿ.ಶೆಟ್ಟಿ, ಜಿ.ಕೃಷ್ಣರಾವ್ ಅರ್ತಿಲ, ಡಾ.ರಾಜಾರಾಮ್, ಮಹಾಲಿಂಗೇಶ್ವರ ಭಟ್ ಉಪಸ್ಥಿತರಿದ್ದರು. 
ದಕ್ಷಿಣ ಕನ್ನಡ

ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಅರಿವು ಮೂಡಿಸುವುದು ಅಗತ್ಯ

ಶಿಕ್ಷಕ-ರಕ್ಷಕ ಸಭೆ

ಉಪ್ಪಿನಂಗಡಿ: ಇಂದಿನ ದಿನಗಳಲ್ಲಿ ಬಹುತೇಕ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಅರಿವಿನ ಕೊರತೆ ಇದ್ದು, ಈ ಬಗ್ಗೆ ಕಾರ್ಯಕ್ರಮ ರೂಪಿಸುವ ಅಗತ್ಯವಿದೆ. ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳು ಸಂಸ್ಕೃತಿ, ಸಂಸ್ಕಾರ ಬೆಳೆಸಲು ಪ್ರೇರಣೆ ನೀಡುವಂತಿರಬೇಕು ಎಂದು ಸಿದ್ದಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಹರಿಪ್ರಸಾದ್ ಬಿ.ಶೆಟ್ಟಿ ಹೇಳಿದರು.

ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಆಂತರಿಕ ಗುಣಮಟ್ಟ ಭರವಸಾ ಕೋಶ, ಶಿಕ್ಷಕ-ರಕ್ಷಕ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ವಾತನಾಡಿದರು.

ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಚಂದ್ರಹಾಸ ಶೆಟ್ಟಿ ವಾತನಾಡಿ, ಕಾಲೇಜಿನಲ್ಲಿ 28 ಮಂದಿ ಕಾಯಂ ಭೋದಕ ಉಪನ್ಯಾಸಕರಿದ್ದು, ವಿದ್ಯಾರ್ಥಿಗಳು ಪಾಠ-ಪ್ರವಚನ, ಕ್ರೀಡೆ, ಸಾಹಿತ್ಯ, ಸಾಂಸ್ಕೃತಿಕವಾಗಿ ಬಹಳ ಸಾಧನೆ ವಾಡುತ್ತಿದ್ದಾರೆ. ಕಾಲೇಜಿನಲ್ಲಿ ಇರುವ ವ್ಯವಸ್ಥೆಗಳು ಖಾಸಗಿ ಕಾಲೇಜಿಗೆ ಸರಿಸಾಟಿಯಾಗಿದ್ದು, ವರ್ಷದಿಂದ ವರ್ಷಕ್ಕೆ ಉತ್ತಮ ಫಲಿತಾಂಶ ಪಡೆಯುತ್ತಿದ್ದೇವೆ ಎಂದರು.

ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ರವಿರಾಜ್ ಎಸ್. ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಜಿ.ಕೃಷ್ಣರಾವ್ ಅರ್ತಿಲ, ಡಾ.ರಾಜಾರಾಮ್, ಮಹಾಲಿಂಗೇಶ್ವರ ಭಟ್ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜನಾ ಸಮಿತಿಯ ಸುರೇಶ್ ಜಿ.ಕೆ., ತೇಜಸ್ವಿ ಕುವಾರ್, ನೇಹಾ ಬಾನು, ಪ್ರವೀಣ್ ಕುವಾರ್ ಉಪಸ್ಥಿತರಿದ್ದರು.

ಕಾರ್ಯಕ್ರಮ ಸಂಯೋಜಕ ಹರಿಪ್ರಸಾದ್ ಸ್ವಾಗತಿಸಿದರು. ಉದಯ ಕುವಾರ್ ಸಿ.ಆರ್. ವಂದಿಸಿದರು. ಮಂಜುನಾಥ ಬಿ.ಆರ್. ನಿರೂಪಿಸಿದರು.