ನಾರಾವಿ ಐಸಿರಿ ಎಂಟರ್‌ಪ್ರೈಸಸ್‌ನಲ್ಲಿ ವಿಜಯವಾಣಿ ಕೂಪನ್ ಅನ್ನು ಉದ್ಯಮಿ ಜೋಸೆಫ್ ಚಾಕೋ ಬಿಡುಗಡೆಗೊಳಿಸಿದರು. ಜಗದೀಶ್ ನಾಯಕ್, ಮಾಲೀಕ ಯೋಗೀಶ್ ಪೂಜಾರಿ ಮೊದಲಾದವರಿದ್ದರು. 
ದಕ್ಷಿಣ ಕನ್ನಡ

ಉತ್ತಮ ಸೇವೆಗೆ ಐಸಿರಿ ಎಂಟರ್‌ಪ್ರೈಸಸ್ ಹೆಸರುವಾಸಿ

ವಿಜಯವಾಣಿ ವಿಜಯೋತ್ಸವ ಕೂಪನ್ ಬಿಡುಗಡೆ

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಸ್ಪರ್ಧಾತ್ಮಕ ಯುಗ ಮತ್ತು ಆನ್‌ಲೈನ್ ವ್ಯವಹಾರಗಳ ನಡುವೆ ವ್ಯಾಪಾರದಲ್ಲಿ ಯಶಸ್ಸು ಗಳಿಸುವುದಕ್ಕೆ ಮಳಿಗೆಯ ಉತ್ಪನ್ನಗಳ ಗುಣಮಟ್ಟ ಮತ್ತು ಮಾಲೀಕರ ಶ್ರಮ ಕಾರಣ. ಸಿಬ್ಬಂದಿಯ ಪ್ರಾಮಾಣಿಕ ಸೇವೆಯಿಂದಾಗಿ ನಾರಾವಿ ಐಸಿರಿ ಎಂಟರ್‌ಪ್ರೈಸಸ್ ಹಲವೇ ವರ್ಷಗಳಲ್ಲಿ ನಾರಾವಿ ಭಾಗದ ಜನಪ್ರಿಯ ಇಲೆಕ್ಟ್ರಾನಿಕ್ ಮಳಿಗೆಯಾಗಿದೆ ಎಂದು ಉದ್ಯಮಿ ಜೋಸೆಫ್ ಚಾಕೋ ಹೇಳಿದರು.

ಐಸಿರಿ ಎಂಟರ್‌ಪ್ರೈಸಸ್‌ನಲ್ಲಿ ರಾಜ್ಯದ ನಂ.1 ಪತ್ರಿಕೆ ವಿಜಯವಾಣಿಯ ವಿಜಯವಾಣಿ ವಿಜಯೋತ್ಸವದ ಕೂಪನ್ ಬಿಡುಗಡೆಗೊಳಿಸಿ ಮಾತನಾಡಿದರು.

ಪ್ರಮುಖರಾದ ಜಗದೀಶ್ ನಾಯಕ್ ಮಾತನಾಡಿ, ವಸ್ತುನಿಷ್ಠ ವರದಿಯೊಂದಿಗೆ ಪ್ರಸಾರವಾಗುವ ವಿಜಯವಾಣಿ ಪತ್ರಿಕೆ ಓದುಗರ ಮನಗೆದ್ದು ರಾಜ್ಯದ ನಂ.1 ಪತ್ರಿಕೆಯಾಗಿದೆ. ಇದರೊಂದಿಗೆ ತಾಲೂಕಿನ ಗ್ರಾಮೀಣ ಭಾಗದ ದೊಡ್ಡ ಇಲೆಕ್ಟ್ರಾನಿಕ್ ಮಳಿಗೆ ಐಸಿರಿ ಎಂಟರ್‌ಪ್ರೈಸರ್ ವಿಜಯವಾಣಿ ವಿಜಯೋತ್ಸವದ ಪಾಲುದಾರರಾಗಿದ್ದು ನಾರಾವಿ ಭಾಗದ ಜನತೆಯ ಭಾಗ್ಯ. ಗುಣಮಟ್ಟದ ಉತ್ಪನ್ನ ಮತ್ತು ನಗುಮೊಗದ ಸೇವೆಗೆ ಐಸಿರಿ ಎಂಟರ್‌ಪ್ರೈಸಸ್ ಮನೆ-ಮನೆಗಳಲ್ಲಿ ಹೆಸರುವಾಸಿಯಾಗಿದೆ ಎಂದರು.

ಮಾಲೀಕ ಯೋಗೀಶ್ ಪೂಜಾರಿ ಮಾತನಾಡಿ, ವಿಜಯವಾಣಿ ಪತ್ರಿಕೆ ದಸರಾ ದೀಪಾವಳಿ ಹಬ್ಬದ ಪ್ರಯುಕ್ತ ಮಾಡುವ ವಿಜಯವಾಣಿ ವಿಜಯೋತ್ಸವದಲ್ಲಿ ಕಳೆದ 8 ವರ್ಷಗಳಿಂದ ನಮ್ಮ ಮಳಿಗೆ ಪಾಲುದಾರನಾಗಿದೆ. ಬೈಕ್, ಟಿ.ವಿ, ಫ್ರಿಡ್ಜ್ ಸಹಿತ ನೂರಾರು ಬಹುಮಾನವನ್ನು ನಮ್ಮ ಗ್ರಾಹಕರು ಪಡೆದಿದ್ದಾರೆ. 2000 ರೂ. ಮೇಲ್ಪಟ್ಟ ಖರೀದಿಗೆ ಕೂಪನ್ ನೀಡಲಾಗುತ್ತಿದ್ದು ಗ್ರಾಹಕರಿಗೆ ಕಾರ್,ಬೈಕ್, ಚಿನ್ನದ ನಾಣ್ಯ ಸಹಿತ 2025 ಬಹುಮಾನ ಗೆಲ್ಲುವ ಅವಕಾಶ ಇದೆ. ನಮ್ಮಲ್ಲಿ ಎಲ್ಲ ಕಂಪನಿಗಳ ಗ್ರಹೋಪಯೋಗಿ ಉತ್ಪನ್ನಗಳಿದ್ದು ವಿಶಾಲವಾದ ಮಳಿಗೆಯಲ್ಲಿ ತಮಗೆ ಬೇಕಾದ ವಸ್ತುಗಳನ್ನು ಆಯ್ಕೆ ಮಾಡಬಹುದು ಎಂದರು. ಪ್ರಗತಿಪರ ಕೃಷಿಕ ಶೀನ ಪೂಜಾರಿ ಮತ್ತು ಮಳಿಗೆಯ ಸಿಬ್ಬಂದಿ ಉಪಸ್ಥಿತರಿದ್ದರು.