ಸಾಂದರ್ಭಿಕ ಚಿತ್ರ 
ದಕ್ಷಿಣ ಕನ್ನಡ

ಗೋಲ್ಡ್ ಮಾರ್ಕೆಟ್‌ನಲ್ಲಿ ಹೂಡಿಕೆ ಆಮಿಷ 10.55 ಲಕ್ಷ ರೂ. ವಂಚನೆ

ಮಂಗಳೂರು: ಗೋಲ್ಡ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಿದರೆ ಅತೀ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭಗಳಿಸಬಹುದೆಂದು ನಂಬಿ ಸಿ 10,55,000ರೂ. ವರ್ಗಾವಣೆ ಮಾಡಿ ವಂಚಿಸಿದ ಬಗ್ಗೆ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರಿಗೆ ಸಾಮಾಜಿಕ ಜಾಲತಾಣ ಮೂಲಕ ಅಪರಿಚಿತ ವ್ಯಕ್ತಿ ಸುಹಾನಿ ಪಟೇಲ್ ಎಂದು ಪರಿಚಯ ಮಾಡಿಕೊಂಡು ಹಂತ ಹಂತವಾಗಿ 10,55,000ರೂ. ಹಣ ಹೂಡಿಕೆ ಮಾಡಿಸಿದ್ದಾನೆ. ಈ ಮೊತ್ತ ಆತ ಹೇಳಿದ ಆ್ಯಪ್‌ನಲ್ಲಿ 60ಲಕ್ಷ ರೂ. ಎಂದು ತೋರಿಸುತ್ತಿತ್ತು. ದೂರುದಾರರು ಹಣದ ಅವಶ್ಯಕತೆಯಿಂದ ಹಣ ಡ್ರಾ ಮಾಡಲು ಯತ್ನಿಸಿದಾಗ ಸಾಧ್ಯವಾಗಿಲ್ಲ. ಈ ಬಗ್ಗೆ ಕಸ್ಟಮರ್ ಸರ್ವಿಸ್‌ಗೆ ವಿಚಾರಿಸಿದಾಗ ಶೇ.30 ಟ್ಯಾಕ್ಸ್ ಮೊತ್ತವನ್ನು ಮೊದಲು ಹಾಕಿದರೆ ಹಣ ವಿತ್ ಡ್ರಾ ಮಾಡಬಹುದೆಂದು ತಿಳಿಸಿದ್ದಾರೆ. ಇದು ಬ್ಯಾಂಕ್‌ನವರಿಗೆ ತಿಳಿಸಿದಾಗ ಇದೊಂದು ವಂಚನಾ ಜಾಲ ಎಂದು ಹೇಳಿದ್ದಾರೆ. ಈ ಸಂದೇಶವನ್ನು ಕಳುಹಿಸಿದ ಕೂಡಲೇ ಆಪ್‌ನಲ್ಲಿರುವ ಹಣವನ್ನು ಶೂನ್ಯ ಮಾಡಿ ಬ್ಲಾಕ್ ಮಾಡಿದ್ದಾರೆ.
ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.