saandarbhika chithra 
ದಕ್ಷಿಣ ಕನ್ನಡ

ಸೆ. 20ರಂದು ಅಂತರ್ ಜಿಲ್ಲಾಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ ಕ್ರೀಡಾಕೂಟ

ಪ್ರಮುಖ ಮುಖ್ಯಾಂಶಗಳು

  • ಸೆ. 16ರ ಒಳಗೆ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ ದ.ಕ., ಉಡುಪಿ ಮತ್ತು ಕೊಡಗು ಅಂತರ್ ಜಿಲ್ಲಾಮಟ್ಟದ ಮಾಸ್ಟರ್ಸ್ ಮತ್ತು ಕಿಡ್ಸ್ ಅಥ್ಲೆಟಿಕ್ ಕ್ರೀಡಾಕೂಟವು ಸೆ. 20ರಂದು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಅಸೋಸಿಯೇಷನ್ ನ ಗೌರವಾಧ್ಯಕ್ಷ ಪ್ರೇಮನಾಥ್ ಶೆಟ್ಟಿ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬೆಳಿಗ್ಗೆ 6 ಗಂಟೆಗೆ ಕ್ರೀಡಾಕೂಟಗಳು ಪ್ರಾರಂಭಗೊಳ್ಳಲಿದ್ದು, ಕ್ರೀಡಾಕೂಟದ ಕಾರ್ಯಕ್ರಮವನ್ನು 9.30ಕ್ಕೆ ಕ್ರೀಡಾ ಇಲಾಖೆ ಉಪನಿರ್ದೇಶಕರಾದ ಪ್ರದೀಪ್ ಡಿ'ಸೋಜಾ ಅವರು ಉದ್ಘಾಟಿಸಲಿದ್ದಾರೆ. 30 ಪ್ಲಸ್‌ನಿಂದ ಆರಂಭವಾಗಿ 90 ಪ್ಲಸ್ ವಯೋಮಿತಿಯ ಪುರುಷ ಹಾಗೂ ಮಹಿಳಾ ಸ್ಪರ್ಧಿಗಳಿಗೆ 3 ಸ್ಪರ್ಧೆಗಳಲ್ಲಿ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ ಎಂದರು.
ಕ್ರೀಡಾಸ್ಪೂರ್ತಿ ಹೆಚ್ಚಿಸುವ ಉದ್ದೇಶದಿಂದ ಮಾಸ್ಟರ್ಸ್ ಅಥ್ಲೆಟಿಕ್ಸ್ ನಡೆಯುವ ಸಂದರ್ಭದಲ್ಲೇ 10, 12 ಮತ್ತು 14 ವರ್ಷದ ಕೆಳಗಿನ ವಯೋಮಿತಿಯ ಗಂಡು ಮತ್ತು ಹೆಣ್ಣು ಮಕ್ಕಳಿಗೆ 400, 200, 100 ಮತ್ತು 60 ಮೀ. ಓಟ, ಲಾಂಗ್‌ಜಂಪ್, ಶಾಟ್‌ಪುಟ್ ಮತ್ತು ಜಾವೆಲಿನ್ ಕ್ರೀಡೆಯನ್ನೂ ಆಯೋಜಿಸಲಾಗಿದೆ. ಸ್ಪರ್ಧಿಗಳು ಶುಲ್ಕವನ್ನು ನೀಡಿ ಸೆ. 16ರ ಒಳಗೆ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ವಿಜೇತರಿಗೆ ಪದಕ ಮತ್ತು ಪ್ರಮಾಣಪತ್ರ ನೀಡಲಾಗುತ್ತದೆ ಎಂದವರು ತಿಳಿಸಿದರು.

ಆಯೋಜನೆಗೊಳ್ಳಲಿರುವ ಕ್ರೀಡಾಕೂಟಗಳು

ಓಟ: 100 ಮೀ., 200, 400, 800, 1500 ಮೀ.
ನಡಿಗೆ: 500 ಮೀ. ಪುರುಷರಿಗೆ ಹಾಗೂ 300 ಮೀ. ಮಹಿಳೆಯರಿಗೆ
ಜಿಗಿತ: ಲಾಂಗ್ ಜಂಪ್, ಟ್ರಿಪಲ್ ಜಂಪ್, ಹೈಜಂಪ್
ಎಸೆತ: ಶಾಟ್‌ಪುಟ್, ಜಾವೆಲಿನ್, ಡಿಸ್ಕಸ್ ಮತ್ತು ಹ್ಯಾಮರ್
ಅಸೋಸಿಯೇಷನ್ ಅಧ್ಯಕ್ಷ ಕೆ. ಜಗದೀಶ ಶೆಟ್ಟಿ, ಉಪಾಧ್ಯಕ್ಷೆ ರೇಖಾ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರಚೇತ ಕೆ., ಕೋಶಾಧಿಕಾರಿ ಚಂದ್ರಹಾಸ ಅಂಚನ್, ಸಂಘಟನಾ ಕಾರ್ಯದರ್ಶಿ ರವಿರಾಜ್ ಪುತ್ತೂರು, ಜಂಟಿ ಕಾರ್ಯದರ್ಶಿ ನಂದಕುಮಾರ್ ಅಂಚನ್ ಅವರು ಸುದ್ದಿಗೋಷ್ಠಿಯಲ್ಲಿದ್ದರು.