ಬಂಟ್ವಾಳ: ನಾಯಕತ್ವ ಗುಣದೊಂದಿಗೆ ಎಲ್ಲರ ಕಷ್ಟಕ್ಕೆ ಸ್ಪಂದಿಸುವ ರವಿಯಣ್ಣನ ಪಾತ್ರ ಸು ಫ್ರಮ್ ಸೊ ಸಿನಿಮಾದಲ್ಲಿ ಎಲ್ಲರಿಗೂ ಮೆಚ್ಚುಗೆಯಾಗಿದ್ದು, ಅಂತಹ ವ್ಯಕ್ತಿ ನಿರ್ಮಾಣ ಕಾರ್ಯ ಸಂಘಟನೆಗಳಿಂದ ಆಗಬೇಕಿದೆ. ಸಮಾಜಮುಖಿ ಸೇವೆಯೊಂದಿಗೆ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ಮಹತ್ತರ ಕಾರ್ಯ ಶ್ಲಾಘನೀಯ ಎಂದು ಸು ಫ್ರಮ್ ಸೊ ಸಿನಿಮಾ ನಟ ಜೆ.ಪಿ.ತೂಮಿನಾಡು ಹೇಳಿದರು.
ತುಂಬೆ ವಳವೂರಿನ ವಿಶ್ವಜ್ಯೋತಿ ಯುವಕ ಸಂಘ ಮತ್ತು ಮಾತೃ ಮಂಡಳಿಯ ಕಟ್ಟಡ ಉದ್ಘಾಟನೆ ಅಂಗವಾಗಿ ಆಯೋಜಿಸಲಾಗಿದ್ದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜ್ಯೋತಿಷಿ ಅನಿಲ್ ಕೆ.ಪಂಡಿತ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಸಂದೇಶ್ ಶೆಟ್ಟಿ ಅರೆಬೆಟ್ಟು, ವಕೀಲ ರಮೇಶ್ ಉಪಾಧ್ಯಾಯ, ತಾಪಂ ಮಾಜಿ ಉಪಾಧ್ಯಕ್ಷ ಪುರುಷ ಸಾಲ್ಯಾನ್ ನೆತ್ತರಕೆರೆ, ಸಾಮಾಜಿಕ ಕಾರ್ಯಕರ್ತ ಗೋಪಾಲ ಕುಲಾಲ್ ಗೋವಿಂತೋಟ ಶುಭ ಹಾರೈಸಿದರು.
ಪ್ರಿಯದರ್ಶಿನಿ ಸುನೀಲ್ ದಾರಿಬಾಗಿಲು, ಗಣೇಶ್ ಸುವರ್ಣ ತುಂಬೆ, ಗೌರವ ಸಲಹೆಗಾರರಾದ ಸುಂದರ್ ಪೂಜಾರಿ ವಳವೂರು, ಸಂಜೀವ ಪೂಜಾರಿ ವಳವೂರು, ಸಂಘದ ಅಧ್ಯಕ್ಷ ಪೂವಪ್ಪ ವಳವೂರು, ಮಾತೃ ಮಂಡಳಿ ಅಧ್ಯಕ್ಷೆ ರಂಜಿನಿ ಉಮನಗುಡ್ಡೆ ಉಪಸ್ಥಿತರಿದ್ದರು. ಶಾಸಕ ರಾಜೇಶ್ ನಾಕ್ ಭೇಟಿ ನೀಡಿದರು. ಹಿರಿಯರಾದ ಸುಂದರ್ ಪೂಜಾರಿ ವಳವೂರು, ಸಂಜೀವ ಪೂಜಾರಿ ವಳವೂರು, ಪೂವಪ್ಪ ವಳವೂರು, ಕೌಶಿಕ್ ವಳವೂರು ಅವರನ್ನು ಸನ್ಮಾನಿಸಲಾಯಿತು. ಅಶಕ್ತರಿಗೆ ಆರ್ಥಿಕ ಸಹಕಾರ ನೀಡಲಾಯಿತು.
ಅಕ್ಬರ್ ಅಲಿ ಸನ್ಮಾನಿತರ ಪಟ್ಟಿ ವಾಚಿಸಿದರು. ಪ್ರದೀಪ್ ಬ್ರಹ್ಮರಕೊಟ್ಲು ವರದಿ ವಾಚಿಸಿದರು. ಭರತ್ ಉಮನಗುಡ್ಡೆ ವಂದಿಸಿದರು. ಜಗದೀಶ ಕಡೆಗೋಳಿ ಕಾರ್ಯಕ್ರಮ ನೀರೂಪಿಸಿದರು. ಸಂಘದ ನೂತನ ಕಟ್ಟಡವನ್ನು ಗುರುಪ್ರಸಾದ್ ಭಂಡಾರಿ ವಳವೂರುಗುತ್ತು ಉದ್ಘಾಟಿಸಿದರು.