ವಿಶ್ವಬೆಳಕು ಸೌಹಾರ್ದ ಸಹಕಾರಿ ಸಂಘ ನಿಯಮಿತದ ನೂತನ ಕಚೇರಿಯ ಉದ್ಘಾಟನಾ ಸಮಾರಂಭವು ಶುಕ್ರವಾರ ಕೊಟ್ಟಾರ ಚೌಕಿಯ ಪ್ರೀತಿರಾಜ್ ಕಾಂಪ್ಲೆಕ್ಸ್‌ನ ಪ್ರಥಮ ಮಹಡಿಯಲ್ಲಿ ನಡೆಯಿತು. 
ದಕ್ಷಿಣ ಕನ್ನಡ

ವಿಶ್ವಬೆಳಕು ಸೌಹಾರ್ದ ಸಹಕಾರಿ ಸಂಘದ ನೂತನ ಕಚೇರಿ ಉದ್ಘಾಟನೆ

ಮಂಗಳೂರು: ವಿಶ್ವಬೆಳಕು ಸೌಹಾರ್ದ ಸಹಕಾರಿ ಸಂಘ ನಿಯಮಿತದ ನೂತನ ಕಚೇರಿಯ ಉದ್ಘಾಟನಾ ಸಮಾರಂಭವು ಶುಕ್ರವಾರ ಕೊಟ್ಟಾರ ಚೌಕಿಯ ಪ್ರೀತಿರಾಜ್ ಕಾಂಪ್ಲೆಕ್ಸ್‌ನ ಪ್ರಥಮ ಮಹಡಿಯಲ್ಲಿ ನಡೆಯಿತು.
ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಯಂತ್ ನಡುಬೈಲ್ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿ, ಸಹಕಾರಿ ಸಂಸ್ಥೆಗಳು ಸಮಾಜದ ಆರ್ಥಿಕ ಅಭಿವೃದ್ಧಿಗೆ ಪೂರಕ ಶಕ್ತಿಯಾಗಿದ್ದು, ವಿಶ್ವಬೆಳಕು ಸೌಹಾರ್ದ ಸಹಕಾರಿ ಸಂಘವು ಪಾರದರ್ಶಕ ಆಡಳಿತ, ಸದಸ್ಯಕೇಂದ್ರಿತ ಸೇವೆ ಹಾಗೂ ಜನಸ್ನೇಹಿ ಕಾರ್ಯಚಟುವಟಿಕೆಗಳ ಮೂಲಕ ಉತ್ತಮ ಹೆಸರು ಗಳಿಸಿದೆ. ನೂತನ ಕಚೇರಿಯ ಮೂಲಕ ಸಂಘವು ಮತ್ತಷ್ಟು ವಿಸ್ತಾರಗೊಂಡು ಸಮಾಜಸೇವೆಯಲ್ಲಿ ಮಾದರಿಯಾಗಲಿ ಎಂದರು.
ವಿಶ್ವಬೆಳಕು ಸೌಹಾರ್ದ ಸಹಕಾರಿ ಸಂಘ ನಿಯಮಿತದ ಸಂಸ್ಥಾಪಕ ಪ್ರಕಾಶ್ ಮೂಲತ್ವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸದಸ್ಯರ ವಿಶ್ವಾಸ ಮತ್ತು ಸೇವಾ ಮನೋಭಾವವೇ ಸಂಘದ ಯಶಸ್ಸಿನ ಬುನಾದಿಯಾಗಿದ್ದು, ನೂತನ ಕಚೇರಿಯ ಮೂಲಕ ಇನ್ನಷ್ಟು ಪರಿಣಾಮಕಾರಿ ಹಾಗೂ ಗುಣಮಟ್ಟದ ಸೇವೆಗಳನ್ನು ಸದಸ್ಯರಿಗೆ ಒದಗಿಸುವ ಸಂಕಲ್ಪ ವ್ಯಕ್ತಪಡಿಸಿದರು.
ಸಂಘದ ಅಧ್ಯಕ್ಷರಾದ ಅಕ್ಷತಾ ಕಡ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪ್ರಮುಖರಾದ ಎಂ. ಡಿ. ಪೂಜಾರಿ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಪ್ರಮುಖರಾದ ನಂದನ್ ಬಿ. ಎನ್., ಸಮಾಜಸೇವಕ ರವಿ ಚಿಲಿಂಬಿ, ಹಾಗೂ ಸಂಘದ ಉಪಾಧ್ಯಕ್ಷ ಹರೀಶ್ ಕೆ. ಪೂಜಾರಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕ ಮಂಡಳಿ ಸದಸ್ಯರು, ಸಿಬ್ಬಂದಿ ವರ್ಗ, ಸದಸ್ಯರು, ಠೇವಣಿದಾರರು ಹಾಗೂ ಗಣ್ಯರು ಉಪಸ್ಥಿತರಿದ್ದರು.