ಒಣಕಸ ಘಟಕವನ್ನು ಹರಿಶ್ಚಂದ್ರ ಶೆಟ್ಟಿಗಾರ್ ಉದ್ಘಾಟಿಸಿದರು. ಗೀತಾ ಡಿ.ಕುಂದರ್, ಹರಿಶ್ಚಂದ್ರ ಶೆಟ್ಟಿಗಾರ್, ಇಬ್ರಾಹಿಂ ಕೋಡಿಜಾಲ್, ರಜನಿ ಡಿ.ಗಟ್ಟಿ ಇನ್ನಿತರರು ಉಪಸ್ಥಿತರಿದ್ದರು.
ಗ್ರಾಮದಲ್ಲಿ ಸ್ವಚ್ಛತೆಗಾಗಿ ಪಂಚಾಯಿತಿ ಸಾಕಷ್ಟು ಕ್ರಮ ಕೈಗೊಂಡಿದ್ದರೂ ರಸ್ತೆಬದಿ ತ್ಯಾಜ್ಯ ರಾಶಿ ಬೀಳುತ್ತಿರುವುದು ಖೇದಕರ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪಂಚಾಯಿತಿಯೊಂದಿಗೆ ಗ್ರಾಮಸ್ಥರೂ ಕೈಜೋಡಿಸಬೇಕು ಎಂದು ಕೊಣಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಡಿ.ಕುಂದರ್ ಮನವಿ ಮಾಡಿದರು.
ಸಣ್ಣಪದವು ಅಡ್ಡರಸ್ತೆಯಲ್ಲಿ ನಿರ್ಮಾಣಗೊಂಡ ಕೊಣಾಜೆ ಗ್ರಾಮ ಪಂಚಾಯಿತಿಯ ಘನತ್ಯಾಜ್ಯ ನಿರ್ವಹಣಾ ಘಟಕ ಸ್ವಚ್ಛ ಸಂಕೀರ್ಣದಲ್ಲಿ ಹಸಿಕಸ ಘಟಕ ಉದ್ಘಾಟಿಸಿ ಮಾತನಾಡಿದರು.
ಕೊಣಾಜೆ ಗ್ರಾ.ಪಂ. ಉಪಾಧ್ಯಕ್ಷ ಹರಿಶ್ಚಂದ್ರ ಶೆಟ್ಟಿಗಾರ್ ಒಣಕಸ ಘಟಕ ಉದ್ಘಾಟಿಸಿದರು. ಮೂಡಾ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಜನಿ ಡಿ.ಗಟ್ಟಿ, ನಿಕಟಪೂರ್ವ ಪಿಡಿಒ ಮುತ್ತಪ್ಪ ಡಿ, ಹಸಿರುದಳದ ವ್ಯವಸ್ಥಾಪಕ ಲಕ್ಷ್ಮೀಕಾಂತ್, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಮಿನಿ ಎಸ್.ನಾಯರ್, ಮೇಲ್ವಿಚಾರಕಿ ನಿವೇದಿತಾ, ಸಮಾಜ ಸೇವಕ ಸುರೇಂದ್ರ ರೈ, ಗ್ರಾ.ಪಂ. ಸದಸ್ಯರಾದ ಇಕ್ಬಾಲ್ ಕೊಣಾಜೆ, ರವಿಕುಮಾರ್ ಡಿಸೋಜ, ರುಕಿಯಾ, ಶೇಖರ್ ಕೊಪ್ಪಲ, ರಾಜೀವಿ ಶೆಟ್ಟಿ, ಶಶಿಕಲಾ, ವನಿತಾ ಶೆಟ್ಟಿ, ಇಕ್ಬಾಲ್ ಬರುವ, ಶೈಲೇಶ್ ಆಂಚನ್, ಶೋಭಾ, ಹೈದರ್ ಅಡ್ಕರೆ, ಫೌಝಿಯಾ, ಝೊಹರಾ, ವೇದಾವತಿ ಗಟ್ಟಿ, ಚಿತ್ರಕಲಾ, ವಿಜೇತಾ ರೈ, ರವಿ ದಡಸ್, ರಾಜೇಶ್ವರಿ ಮೊದಲಾದವರು ಉಪಸ್ಥಿತರಿದ್ದರು.
ನಿಗದಿತ ಜಾಗದಲ್ಲಿ ಘಟಕ ನಿರ್ಮಾಣ ಸಾಧ್ಯವೇ ಇಲ್ಲ ಎಂದು ಹಲವರು ಹಿಂದಕ್ಕೆ ಹೋಗಿದ್ದರೆ, ಭೂಮಿಪೂಜೆ ಮಾಡಿ ಹೋದವರೂ ಇದ್ದಾರೆ. ಕೊಣಾಜೆ ದೊಡ್ಡ ಗ್ರಾಮವಾಗಿದ್ದು ಘಟಕ ವ್ಯವಸ್ಥಿತ ರೀತಿಯಲ್ಲಿ ನಿರ್ವಹಣೆಯಾಗಿ ತಾಲೂಕಿಗೆ ಮಾದರಿಯಾಗಲಿ.