ಮಂಗಳೂರು: ಸೇಂಟ್ ಆಗ್ನೆಸ್ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಘಟಕವು ಭಾರತೀಯ ಜ್ಞಾನ ವ್ಯವಸ್ಥೆ (ಐಕೆಎಸ್) ಕೇಂದ್ರ ಫೆಬ್ರವರಿ 27ರಂದು ಬೆಳಿಗ್ಗೆ 10ಕ್ಕೆ ಉದ್ಘಾಟನೆಗೊಳ್ಳಲಿದೆ.
ಈ ಕೇಂದ್ರವು ಭಾರತದ ಸಮೃದ್ದ ಬೌದ್ದಿಕ ಪರಂಪರೆಯನ್ನು ಪುನರುಜ್ಜಿವನಗೊಳಿಸಲು, ಸಂರಕ್ಷಿಸಲು ಮತ್ತು ಉತ್ತೇಜಿಸಲು, ಜೊತೆಗೆ ಪರಂಪರೆಯ ಜ್ಞಾನ ಮತ್ತು ಆಧುನಿಕ ಶೈಕ್ಷಣಿಕ ಸಂಶೋಧನೆಯ ನಡುವಿನ ಸಂವಾದವನ್ನು ಉತ್ತೇಜಿಸಲು ಉದ್ದೇಶಿಸಲಾಗಿದೆ.
ಅಲ್ವಾಸ್ ಎಜುಕೇಶನ್ ಫೌಂಡೇಶನ್‌ನ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವಾ ಉದ್ಘಾಟಕರಾಗಿ ಭಾಗವಹಿಸಲಿದ್ದು, ನಿಟ್ಟೆ ವಿಶ್ವವಿದ್ಯಾಲಯದ ಸಂಶೋಧನಾ ಸಲಹೆಗಾರ ಪ್ರೊ. ಡಾ. ಇ ಕರೂಣಾಸಾಗರ ಮುಖ್ಯ ಅತಿಥಿಯಾಗಿ ಹಾಜರಾಗಲಿದ್ದಾರೆ. ನಿಟ್ಟೆ ವಿಶ್ವವಿದ್ಯಾಲಯದ ನಿರ್ದೇಶಕಿ (ಆರ್.ಡಿ) ಪ್ರೊ. ಡಾ. ಇಂದ್ರಾಣಿ ಕರೂಣಾಸಾಗರ ಹಾಗೂ ಅಳಿಕೆಯ ಜೆಡ್ಡು ಆಯುರ್ವೇದ ವಿಶೇಷ ಆಸ್ಪತ್ರೆಯ ಡಾ. ಜೆಡ್ಡು ಗಣಪತಿ ಭಟ್ ಭಾಗವಹಿಸಲಿದ್ದಾರೆ. ಸೇಂಟ್ ಆಗ್ನೆಸ್ ಕಾಲೇಜಿನ ಪ್ರಾಂಶುಪಾಲರಾದ ಸಿಸ್ಟರ್ ಡಾ. ಎಂ. ವೆನಿಸ್ಸಾ ಎ.ಸಿ. ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಂಯೋಜಕರಾದ ಡಾ. ವಿಶಾಲಾ ಬಿ.ಕೆ. ಮತ್ತು ಡಾ. ಸಬೀನಾ ಡಿಸೋಜಾ ಉಪಸ್ಥಿತರಿರುವರು.
ಈ ಕೇಂದ್ರವು ಭಾರತದ ಜ್ಞಾನ ಪರಂಪರೆಯ ಗೌರವವನ್ನು ಬೆಳೆಸುವ, ಸಂಶೋಧನೆ ಮತ್ತು ನವೀನತೆಯನ್ನು ಉತ್ತೇಜಿಸುವ ದೀಪಸ್ತಂಭವಾಗಲಿದೆ. ಈ ಸಂದರ್ಭದಲ್ಲಿ ಜ್ಞಾನದ ಬೇರುಗಳು: ಭಾರತದ ಜೀವಂತ ಪರಂಪರೆ ಎಂಬ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಸೇಂಟ್ ಆಗ್ನೆಸ್ ಕಾಲೇಜು ಪ್ರಕಟಣೆಯಲ್ಲಿ ತಿಳಿಸಿದೆ.