ಶ್ರೀ ಶಕ್ತಿ ಜಟಾಧಾರಿ ಭಜನಾ ಮಂದಿರ ಲೋಕಾರ್ಪಣೆ, ದೇವರ ಬೆಳ್ಳಿಯ ಉಬ್ಬು ಛಾಯಾ ಬಿಂಬದ ಪ್ರತಿಷ್ಠಾಪನಾ ಮಹೋತ್ಸವ ಧಾರ್ಮಿಕ ಸಭೆಯಲ್ಲಿ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಮಾತನಾಡಿದರು. 
ದಕ್ಷಿಣ ಕನ್ನಡ

ಭಗವಂತನ ಅನುಸಂಧಾನಕ್ಕೆ ಭಜನೆ ಸುಲಭ ದಾರಿ : ಒಡಿಯೂರು ಶ್ರೀ

ಭಕ್ತರ ಭಕ್ತಿ, ಭಾವನೆ ಸಾನ್ನಿಧ್ಯಕ್ಕೆ ಶಕ್ತಿ ನೀಡುತ್ತದೆ. ಮಂದಿರದ ಒಳಗೆ ರಾಜಕೀಯ, ನಿಂದನೆ, ದೂಷಣೆ ಮಾಡಬಾರದು. ಜಾತಿಗಿಂತ ನೀತಿಗೆ ಮೌಲ್ಯ ನೀಡಬೇಕು. ನಮ್ಮೊಳಗಿನ ಭಿನ್ನಾಭಿಪ್ರಾಯ ನಮಗೆ ಅಪಾಯ ಎಂಬುದನ್ನು ಅರಿತು ಪ್ರತಿಯೊಬ್ಬರೂ ಜಾಗೃತವಾಗಬೇಕು.