ಕುದ್ಮಾರು ಶಾಲೆಯಲ್ಲಿ ಶೈಕ್ಷಣಿಕ-ಸಂಕಲನ ಸರಣಿ ಕಾರ್ಯಕ್ರಮಕ್ಕೆ ನಿವೃತ್ತ ಮುಖ್ಯಶಿಕ್ಷಕಿ ಕೆ.ಸುಶೀಲಾ ಮೋಹನ್ ಚಾಲನೆ ನೀಡಿದರು. ಪ್ರಮುಖರಾದ ರಾಜೇಂದ್ರ ಭಟ್, ಶಿವರಾಮ ಏನೆಕಲ್ಲು, ದೇವರಾಜ ನೂಜಿ ಮೊದಲಾದವರಿದ್ದರು. 
ದಕ್ಷಿಣ ಕನ್ನಡ

ಸರ್ವತೋಮುಖ ಅಭಿವೃದ್ಧಿಗೆ ಪೂರಕ : ಸೀತಾರಾಮ ಕೇವಳ

ಕಡಬ: ಕೇವಲ ಅಂಕ ಗಳಿಕೆಯೊಂದೇ ಕಲಿಕೆಯಲ್ಲ. ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಬದುಕು ಕಟ್ಟಿಕೊಡುವ ಶಿಕ್ಷಣದೊಂದಿಗೆ ಸತ್ಪ್ರಜೆಗಳನ್ನಾಗಿ ರೂಪಿಸುವ ಶಿಕ್ಷಣದ ಅವಶ್ಯವಿದೆ ಎಂದು ರಾಷ್ಟ್ರೀಯ ವಿಕಸನ ತರಬೇತಿದಾರ ರಾಜೇಂದ್ರ ಭಟ್ ಕೆ. ಅಭಿಪ್ರಾಯಪಟ್ಟರು.


ಕುದ್ಮಾರು ಶಾಲಾ ಹಿರಿಯ ವಿದ್ಯಾರ್ಥಿ ಸಂಘ ಹಾಗೂ ಎಸ್‌ಡಿಎಂಸಿ ವತಿಯಿಂದ ಶೈಕ್ಷಣಿಕ- ಸಂಕಲನ ಸರಣಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.


ಕುದ್ಮಾರು ಶಾಲಾ ನಿವೃತ್ತ ಮುಖ್ಯಶಿಕ್ಷಕಿ ಕೆ.ಸುಶೀಲಾ ಮೋಹನ್ ಉದ್ಘಾಟಿಸಿದರು. ಮುಖ್ಯಶಿಕ್ಷಕಿ ಮಿನಿ ವರ್ಗೀಸ್ ಅಧ್ಯಕ್ಷತೆ ವಹಿಸಿದ್ದರು.


ಜೆಸಿಐ ವಿಕಸನ ತರಬೇತುದಾರ ರಾಜೇಂದ್ರ ಭಟ್, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಶಿವರಾಮ ಏನೆಕಲ್ಲು, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ದೇವರಾಜ ನೂಜಿ ಉಪಸ್ಥಿತರಿದರು.


ಹಿರಿಯ ವಿದ್ಯಾರ್ಥಿ ಸಂಘ ಅಧ್ಯಕ್ಷ ರಾಮಚಂದ್ರ ಸ್ವಾಗತಿಸಿದರು. ಪ್ರೌಢಶಾಲಾ ಸಹ ಶಿಕ್ಷಕಿ ಶ್ರೀಲತಾ, ವೀಣಾ ಕೆ. ನಿರೂಪಿಸಿದರು. ಕಾರ್ಯದರ್ಶಿ ನಾಗೇಶ್ ಕೆಡೆಂಜಿ ವಂದಿಸಿದರು.