ಎಸ್‌ಡಿಎಂ ತಾಂತ್ರಿಕ ಮಹಾವಿದ್ಯಾಲಯ ಮತ್ತು ಕೆಎಸ್‌ಸಿಎಸ್‌ಟಿ ನಡುವೆ ತಿಳಿವಳಿಕಾ ಒಪ್ಪಂದಕ್ಕೆ ಸಹಿ ಹಾಕಲಾಯಿತು. ವಿನೀತ್ ಕುಮಾರ್ ಎಸ್.ಆರ್., ಡಾ.ಸಂದೀಪ್ ಆರ್., ಪ್ರೊ.ಎಸ್.ಎನ್.ಕಾಕತ್ಕರ್ ಮೊದಲಾದವರಿದ್ದರು. 
ದಕ್ಷಿಣ ಕನ್ನಡ

ಬೌದ್ಧಿಕ ಆಸ್ತಿ ಹಕ್ಕುಗಳ ರಕ್ಷಣೆಗೆ ಮಹತ್ವ

ಎಸ್‌ಡಿಎಂಐಟಿ-ಕೆಎಸ್‌ಸಿಎಸ್‌ಟಿ ಒಪ್ಪಂದ

ಬೆಳ್ತಂಗಡಿ: ಹೊಸ ಆಲೋಚನೆಗಳು ಮತ್ತು ಆವಿಷ್ಕಾರಗಳನ್ನು ಬೌದ್ಧಿಕ ಆಸ್ತಿ ಹಕ್ಕುಗಳ ಮೂಲಕ ಸಂರಕ್ಷಿಸುವುದು ಹಾಗೂ ಅವುಗಳನ್ನು ಮೌಲ್ಯಯುತ ಆಸ್ತಿಗಳಾಗಿ ರೂಪಿಸುವುದು ಇಂದಿನ ಕಾಲದಲ್ಲಿ ಅತ್ಯಂತ ಮಹತ್ವದ ವಿಚಾರ ಎಂದು ಬೆಂಗಳೂರಿನ ಕೆಎಸ್‌ಸಿಎಸ್‌ಟಿ ಯೋಜನಾ ಇಂಜಿನಿಯರ್ ವಿನೀತ್ ಕುಮಾರ್ ಎಸ್.ಆರ್. ಹೇಳಿದರು.

ಉಜಿರೆಯ ಎಸ್‌ಡಿಎಂ ತಾಂತ್ರಿಕ ಮಹಾವಿದ್ಯಾಲಯ ಮತ್ತು ಬೆಂಗಳೂರಿನ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆಎಸ್‌ಸಿಎಸ್‌ಟಿ) ಸಹಯೋಗದೊಂದಿಗೆ ಕಾಲೇಜಿನಲ್ಲಿ ಬೌದ್ಧಿಕ ಆಸ್ತಿ ಹಕ್ಕು ಘಟಕ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಸಂಶೋಧನೆ, ನಾವೀನ್ಯ ಹಾಗೂ ವಿದ್ಯಾರ್ಥಿಗಳ ಯೋಜನೆಗಳ ಅಭಿವೃದ್ಧಿಗೆ ಪರಸ್ಪರ ಸಹಕಾರ ನೀಡುವ ಉದ್ದೇಶದಿಂದ ಕೆಎಸ್‌ಸಿಎಸ್‌ಟಿ ಮತ್ತು ಎಸ್‌ಡಿಎಂಐಟಿ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಪ್ರಾಂಶುಪಾಲ ಡಾ.ಸಂದೀಪ್ ಆರ್. ಮಾತನಾಡಿದರು. ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಸಂಯೋಜಕ ಪ್ರೊ.ಎಸ್.ಎನ್.ಕಾಕತ್ಕರ್ ಅಧ್ಯಕ್ಷತೆ ವಹಿಸಿದ್ದರು.

ಉಪಪ್ರಾಂಶುಪಾಲ ಡಾ.ಗಿರೀಶ್ ಕುಮಾರ್, ಪ್ರಥಮ ವರ್ಷದ ವಿಭಾಗದ ಡೀನ್ ಡಾ.ನವೀನ್ ಕುಮಾರ್, ಪ್ರಮುಖರಾದ ಡಾ.ಸಹನಾ, ಡಾ.ಜಿ.ಪಿ.ಹೆಗ್ಡೆ, ಡಾ.ಸತ್ಯನಾರಾಯಣ, ಡಾ.ಅಂಥೀಶ್, ಡಾ.ಸುಬ್ರಹ್ಮಣ್ಯ ಭಟ್, ಎ.ಡಿಎಂ ಶಿಕ್ಷಣ ಸಂಸ್ಥೆಗಳ ಸಾರ್ವಜನಿಕ ಸಂಪರ್ಕ ಸಮೂಹ ಮಾಧ್ಯಮಗಳ ಸಂಯೋಜಕ ಅರವಿಂದ ಮೊದಲಾದವರು ಇದ್ದರು. ಐಪಿಆರ್ ಘಟಕದ ಸಂಯೋಜಕ ಡಾ.ಪದ್ಮಪ್ರಸಾದ್ ಸ್ವಾಗತಿಸಿದರು.