ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಮಹಾಜನ ವರದಿ ಜಾರಿ ಮುಗಿದ ಅಧ್ಯಾಯವಲ್ಲ, ಕಾಸರಗೋಡಿನ ಕನ್ನಡಿಗರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮಹಾಜನ ವರದಿಯನ್ನು ಯಥಾವತ್ ಜಾರಿಗೊಳಿಸುವುದೊಂದೇ ಪರಿಹಾರವಾಗಬಲ್ಲದು ಎಂದು ಕನ್ನಡದ ಹಿರಿಯ ಹೋರಾಟಗಾರ, ನಿವೃತ್ತ ಮುಖ್ಯಶಿಕ್ಷಕ ನಾರಾಯಣ ಗಟ್ಟಿ ಕುಂಬಳೆ ತಿಳಿಸಿದರು.
ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಮೇಲೆ ಹೆಚ್ಚುತ್ತಿರುವ ದೌರ್ಜನ್ಯವನ್ನು ಪ್ರತಿಭಟಿಸಿ ಕನ್ನಡಪರ ಸಂಟನೆಗಳ ವತಿಯಿಂದ ಭಾನುವಾರ ಆಯೋಜಿಸಿದ್ದ ಕನ್ನಡ ಜಾಗೃತಿ ಸವಾವೇಶ ಉದ್ಘಾಟಿಸಿ ವಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಮಿತಿ ಅಧ್ಯಕ್ಷ, ವಕೀಲ ಮುರಳೀಧರ ಬಳ್ಳಕ್ಕುರಾಯ ಮಾತನಾಡಿ, ಕಾಸರಗೋಡಿನಲ್ಲಿ ಕನ್ನಡ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಕನ್ನಡಿಗನೂ ಭಾಷೆಯ ರಾಯಭಾರಿಯಾಗಬೇಕು ಎಂದರು.
ಕ.ಸಾ.ಪ. ಕೇರಳ ಗಡಿನಾಡ ಟಕದ ಅಧ್ಯಕ್ಷ ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ರಾಜೇಂದ್ರ ಕಲ್ಲೂರಾಯ ಎಡನೀರು, ಗಮಕ ಕಲಾ ಪರಿಷತ್ ಗಡಿನಾಡ ಟಕದ ಅಧ್ಯಕ್ಷ ಟಿ.ಶಂಕರ ನಾರಾಯಣ ಭಟ್, ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಅಬ್ದುಲ್ ರಹಿವಾನ್ ಸುಬ್ಬಯ್ಯಕಟ್ಟೆ, ಗಣೇಶ ಪ್ರಸಾದ ಪಾಣೂರು, ಮುಹಮ್ಮದಾಲಿ ಪೆರ್ಲ, ಶಿವರಾಮ ಕಾಸರಗೋಡು, ಸತೀಶ್ ಬಿ.ಕೂಡ್ಲು, ಗೋಪಾಲ ಶೆಟ್ಟಿ ಅರಿಬೈಲ್, ನಿರಂಜನ ಕೊರಕ್ಕೋಡು, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಸೂರ್ಯಭಟ್ ಎಡನೀರು, ಆಯಿಷಾ ಎ.ಎ.ಪೆರ್ಲ, ಲೋಕೇಶ್ ಎಂ.ಬಿ. ಆಚಾರ್ ಸೇರಿದಂತೆ ವಿವಿಧ ಕನ್ನಡ ಸಂಟನೆಗಳ ಪ್ರತಿನಿಧಿಗಳು ಹಾಗೂ ಅಧ್ಯಾಪಕ ವೃಂದದವರು ಪಾಲ್ಗೊಂಡರು. ಕನ್ನಡ ವಾಧ್ಯಮ ಅಧ್ಯಾಪಕರ ಸಂದ ಕಾರ್ಯದರ್ಶಿ ಪ್ರದೀಪ ಶೆಟ್ಟಿ ಬೇಳ ಸ್ವಾಗತಿಸಿದರು. ವಿಶಾಲಾಕ್ಷ ಪುತ್ರಕಳ ನಿರೂಪಿಸಿದರು. ವರಪ್ರಸಾದ ಕೋಟೆಕಣಿ ಪ್ರತಿಜ್ಞೆ ಬೋಧಿಸಿ ವಂದಿಸಿದರು.