ಪಿಕಪ್ ವಾಹನದಲ್ಲಿ ಜಾನುವಾರು ಸಾಗಾಟ  
ದಕ್ಷಿಣ ಕನ್ನಡ

ಜಾನುವಾರುಗಳ ಅಕ್ರಮ ಸಾಗಾಟ

ಸಂಪ್ಯ ಠಾಣೆ ಪೊಲೀಸರು ಪ್ರಕರಣ ದಾಖಲು

ಪುತ್ತೂರು ಗ್ರಾಮಾಂತರ: ಕೇರಳಕ್ಕೆ ಅಕ್ರಮವಾಗಿ ಹಿಂಸಾತ್ಮಕ ರೀತಿಯಲ್ಲಿ ಪಿಕಪ್ ವಾಹನದಲ್ಲಿ ಜಾನುವಾರು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಸಂಪ್ಯ ಠಾಣೆ ಪೊಲೀಸರು ಬಲ್ನಾಡು ಗ್ರಾಮದ ಬುಳೇರಿಕಟ್ಟೆ ಎಂಬಲ್ಲಿ ಸೋಮವಾರ ನಸುಕಿನ ವೇಳೆ ಪತ್ತೆ ಮಾಡಿ ಪ್ರಕರಣ ದಾಖಲಿಸಿದ್ದಾರೆ. ವಾಹನದಲ್ಲಿದ್ದ 11 ಜಾನುವಾರುಗಳನ್ನು ರಕ್ಷಿಸಲಾಗಿದೆ.

ಜಾನುವಾರುಗಳ ಅಕ್ರಮ ಸಾಗಾಟ ಕುರಿತು ಬಜರಂಗದಳದ ಕಾರ್ಯಕರ್ತರೊಬ್ಬರು ನೀಡಿದ ಮಾಹಿತಿಯಂತೆ ಸಂಪ್ಯ ಪೊಲೀಸ್ ಠಾಣೆ ಎಸ್‌ಐ ಸುಷ್ಮಾ ಜಿ.ಭಂಡಾರಿ ಸಿಬ್ಬಂದಿ ಜತೆ ಕಾರ್ಯಾಚರಣೆ ನಡೆಸಿದರು. ಬಲ್ನಾಡು ಗ್ರಾಮದ ಬುಳೇರಿಕಟ್ಟೆಯಲ್ಲಿ ಟಾರ್ಪಾಲ್ ಹೊದಿಸಿಕೊಂಡು ಹೋಗುತ್ತಿದ್ದ ಪಿಕಪ್ ವಾಹನವನ್ನು ಪೊಲೀಸ್ ವಾಹನ ಹಿಂದಿಕ್ಕಿ ಹೋಗಲು ಮುಂದಾಗುತ್ತಿದ್ದಂತೆಯೇ ಪೊಲೀಸರನ್ನು ಕಂಡ ಪಿಕಪ್ ಚಾಲಕ ರಸ್ತೆ ಬದಿ ವಾಹನ ನಿಲ್ಲಿಸಿ ಇನ್ನೊಬ್ಬ ವ್ಯಕ್ತಿ ಜತೆ ಪರಾರಿಯಾಗಿದ್ದಾನೆ. ಪೊಲೀಸರು ಜಾನುವಾರುಗಳನ್ನು ರಕ್ಷಿಸಿ ವಾಹನ ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.