ಉಪ್ಪಿನಂಗಡಿ: ಪೊಲೀಸ್ ಸಿಬ್ಬಂದಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬೇರಿಕೆ ಹಾಗೂ 34 ನೆಕ್ಕಿಲಾಡಿಯಲ್ಲಿ ಪೊಲೀಸ್ ವಸತಿಗೃಹಗಳ ನವೀಕರಣ ಮತ್ತು ನೂತನ ಕಟ್ಟಡ ನಿರ್ವಾಣ ಕಾಮಗಾರಿ ನಡೆಯುತ್ತಿದೆ. ನಿಗದಿತ ಸಮಯಕ್ಕೆ ಕಾಮಗಾರಿ ಪೂರ್ಣಗೊಂಡರೆ ಒಟ್ಟು 24 ಮನೆಗಳು ಪೊಲೀಸರ ವಾಸಕ್ಕೆ ಲಭ್ಯವಾಗಲಿವೆ.
ಬೇರಿಕೆಯಲ್ಲಿ ಮೂರು ಮಹಡಿಗಳ ಎರಡು ಕಟ್ಟಡಗಳಿದ್ದು, ಒಟ್ಟು 12 ಮನೆಗಳಿವೆ. ಕಟ್ಟಡದ ಬಣ್ಣ ವಾಸಿದ್ದು, ಟೈಲ್ಸ್ ಒಡೆದು ಹೋಗಿ, ನೀರಿನ ಸಮಸ್ಯೆ ಹಾಗೂ ಸುತ್ತಮುತ್ತ ಗಿಡಗಂಟಿಗಳು ಬೆಳೆದು ಹಾವುಗಳ ಭೀತಿ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಮನೆಗಳನ್ನು ತೆರವುಗೊಳಿಸಿ ಖಾಸಗಿ ಕಟ್ಟಡಗಳಿಗೆ ಸ್ಥಳಾಂತರಗೊಂಡಿದ್ದರು. ಈಗ ಸುವಾರು 16 ಲಕ್ಷ ರೂ. ವೆಚ್ಚದಲ್ಲಿ ನವೀಕರಣ ಕಾಮಗಾರಿ ನಡೆಯುತ್ತಿದ್ದು, ಟೈಲ್ಸ್ ಅಳವಡಿಕೆ ಶೇ.90 ಹಾಗೂ ಪೈಂಟಿಂಗ್ ಶೇ.70ರಷ್ಟು ಪೂರ್ಣಗೊಂಡಿದೆ. ಉಳಿದ ದುರಸ್ತಿ ಕೆಲಸಗಳು ಮುಗಿಯಲು ಒಂದೆರಡು ತಿಂಗಳು ಬೇಕಾಗಬಹುದು ಎಂದು ಗುತ್ತಿಗೆದಾರರು ತಿಳಿಸಿದ್ದಾರೆ.
ಹಿರಿಯ ಅಧಿಕಾರಿಗಳಿಗಾಗಿ ನಿರ್ಮಿಸಿದ ಮನೆಯೊಂದು ಬಳಕೆಯಾಗದೆ ಬೀಗ ಹಾಕಿದ ಸ್ಥಿತಿಯಲ್ಲಿದೆ. ಮನೆಯ ಸುತ್ತಮುತ್ತ ಸ್ವಚ್ಛಗೊಳಿಸಿ ದುರಸ್ತಿ ವಾಡಿದರೆ ಸರ್ಕಾರಿ ಆಸ್ತಿಯ ರಕ್ಷಣೆಯೂ ಆಗಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.
ಇನ್ನು 34 ನೆಕ್ಕಿಲಾಡಿ ಜಂಕ್ಷನ್ನ ಹಳೆಯ ವಸತಿ ಗೃಹದ ಸ್ಥಳದಲ್ಲಿ ಎರಡು ಆರ್ಸಿಸಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದ್ದು, ಇವುಗಳಲ್ಲಿ ಒಟ್ಟು 12 ಮನೆಗಳಿರಲಿವೆ. ಈ ಕಾಮಗಾರಿ ಮುಂಬರುವ ಎಪ್ರಿಲ್-ಮೇ ತಿಂಗಳೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಿಂದ ಕೇವಲ ಒಂದು ಕಿ.ಮೀ. ದೂರದಲ್ಲಿರುವ ಈ ವಸತಿ ಗೃಹಕ್ಕೆ ಹೆಚ್ಚಿನ ಬೇಡಿಕೆ ಬರುವ ಸಾಧ್ಯತೆಯಿದೆ. ಎರಡೂ ಕಾಮಗಾರಿಗಳು ಪೂರ್ಣಗೊಂಡರೆ ಪೊಲೀಸರಿಗೆ ಒಟ್ಟು 24 ಮನೆಗಳು ಲಭ್ಯವಾಗಲಿವೆ.