ಸಾಂದರ್ಭಿಕ ಚಿತ್ರ 
ದಕ್ಷಿಣ ಕನ್ನಡ

ಅನ್ಯಮತೀಯನ ಜತೆ ತೆರಳಿದ್ದ ಗೃಹಿಣಿ ಬಂಧನ

ತಳಿಪರಂಬ ಪೊಲೀಸ್ ಠಾಣೆ ವ್ಯಾಪ್ತಿಯ ಕೂವೇರಿ ನಿವಾಸಿ, 42ರ ಹರೆಯದ ಗೃಹಿಣಿ ಚೆಂಗಳಾಯಿ ನಿವಾಸಿ ಶಫೀರ್ ಎಂಬಾತನ ಜತೆ ಸುತ್ತಾಡುತ್ತಿರುವ ಮಧ್ಯೆ ಕಾಸರಗೋಡಿನಿಂದ ನಗರ ಠಾಣೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ನ.7ರಂದು ಬೆಳಗ್ಗೆ ಇಂಟರ್‌ವ್ಯೆ ಇರುವುದಾಗಿ ಮನೆಯಿಂದ ತೆರಳಿದ್ದ ಮಹಿಳೆ ಮನೆಗೆ ವಾಪಸಾಗದ ಹಿನ್ನೆಲೆಯಲ್ಲಿ ಪತಿ ತಳಿಪರಂಬ ಠಾಣೆಗೆ ದೂರು ನೀಡಿದ್ದರು.
ಕೆಲವು ದಿನಗಳ ಹಿಂದೆಯಷ್ಟೇ ಈಕೆ ಆರ್ಥಿಕ ವಂಚನೆಗೆ ಸಂಬಂಧಿಸಿ ಶಫೀರ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುವ ಮಧ್ಯೆ ಗೃಹಿಣಿ ಈತನ ಜತೆ ಪರಾರಿಯಾಗಿರುವುದು ಸಂಶಯಕ್ಕೆ ಕಾರಣವಾಗಿದೆ. ಮನೆಯವರಿಗೆ ಸಂಶಯ ಬಾರದಿರಲು ಶಫೀರ್ ವಿರುದ್ಧ ಸುಳ್ಳು ದೂರು ದಾಖಲಿಸಿರಬೇಕೆಂದು ಸಂಶಯಿಸಲಾಗಿದೆ. ಇವರಿಬ್ಬರೂ ಸಾಮಾಜಿಕ ಜಾಲತಾಣದ ಮೂಲಕ ಪರಿಚಯಗೊಂಡಿದ್ದರೆನ್ನಲಾಗಿದೆ.