ದ.ಕ. ಜಿಲ್ಲಾ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಎಸಿಪಿ ವಿಜಯ ಕ್ರಾಂತಿ ಅವರ ನೇತೃತ್ವದಲ್ಲಿ ಆಕರ್ಷಕ ಪಥಸಂಚಲನ ನಡೆಯಿತು. ಅತಿಥಿಗಳಿಗೆ ಪೊಲೀಸರಿಂದ ಗೌರವ ವಂದನೆ ಸಲ್ಲಿಸಲಾಯಿತು. 
ದಕ್ಷಿಣ ಕನ್ನಡ

ಸ್ವಾತಂತ್ರ್ಯೋತ್ಸವದ ಅಂಗವಾಗಿ ಅಶ್ವಾರೋಹಣ: "ಫ್ರೀಡಂ ರೈಡ್"

ಪ್ರಮುಖ ಮುಖ್ಯಾಂಶಗಳು

  • ಎಸಿಪಿ ವಿಜಯ ಕ್ರಾಂತಿಯವರ ವಿವಿಧ ತಂಡಗಳ ಆಕರ್ಷಕ ಪಥಸಂಚಲನ
ಮಂಗಳೂರು: ಸ್ವಾತಂತ್ರ್ಯೋತ್ಸವದ ಅಂಗವಾಗಿ ಮಂಗಳೂರು ಹಾರ್ಸ್ ರೈಡಿಂಗ್ ಅಕಾಡೆಮಿ ವತಿಯಿಂದ ನಗರದ ಹೃದಯ ಭಾಗದಲ್ಲಿ ಶನಿವಾರ ಅಶ್ವಾರೋಹಣದೊಂದಿಗೆ ಸ್ವಾತಂತ್ರ್ಯ ಸವಾರಿ ನಡೆಯಿತು.
ದ.ಕ. ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮರಣಾರ್ಥ ಆಯೋಜಿಸಲಾದ ಈ ಕುದುರೆಗಳ ಜೊತೆಗಿನ ಫ್ರೀಡಂ ರೈಡ್‌ನಲ್ಲಿ ಅಕ್ಷಮ್ಯ, ಮನೋಜ್, ಹುದಾ, ನಿಕೇಪ್, ವಿಹಾನ್, ನಿತ್ಯಾನಂದ ಸಿದ್ಧಿಯವರು ಭಾಗವಹಿಸಿದ್ದರು. ಅವಿನಾಶ್ ಅಚ್ಚನಹಳ್ಳಿ ನೇತೃತ್ವದಲ್ಲಿ ನಡೆದ ಈ ಅಶ್ವಾರೋಹಣ ಫ್ರೀಡಂ ರೈಡ್ ನಗರದ ಕದ್ರಿಯಿಂದ ಕೆಎಸ್‌ಆರ್‌ಟಿಸಿ, ಲಾಲ್‌ಬಾಗ್, ಸಿಟಿ ಸೆಂಟರ್, ಹಂಪನಕಟ್ಟೆಯ ಮೂಲಕ ನೆಹರೂ ಮೈದಾನದಲ್ಲಿ ಕೊನೆಗೊಂಡಿತು.
ನೆಹರೂ ಮೈದಾನದಲ್ಲಿ ಪೊಲೀಸ್ ಬ್ಯಾಂಡ್‌ನೊಂದಿಗೆ ರಾಷ್ಟ್ರಗೀತೆ, ಕೆನರಾ ಶಾಲೆ ಮಕ್ಕಳಿಂದ ವಂದೇ ಮಾತರಂ, ನಾಡಗೀತೆ ಹಾಗೂ ರೈತ ಗೀತೆ ಗಾಯನ ನಡೆಯಿತು.
ಎಸಿಪಿ ವಿಜಯ ಕ್ರಾಂತಿಯವರು ವಿವಿಧ ತಂಡಗಳ ಆಕರ್ಷಕ ಪಥಸಂಚಲನದ ನೇತೃತ್ವ ವಹಿಸಿದ್ದರು. ಪಥಸಂಚಲನದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಮುಲ್ಲೇಕಾಡು ಸರಕಾರಿ ಪ್ರಾಥಮಿಕ ಶಾಲೆಯ ಸೇವಾದಳದ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ ಹಾಗೂ ಎಸ್‌ಡಿಎಂ ಅಶೋಕನಗರದ ಸ್ಕೌಟ್ಸ್ ಬಾಲಕರ ತಂಡ ದ್ವಿತೀಯ ಸ್ಥಾನದ ರೋಲಿಂಗ್ ಶೀಲ್ಡ್ ಪಡೆಯಿತು.
ಕಳೆದ ಫೆಬ್ರವರಿ ತಿಂಗಳಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ 63ರ ಹರೆಯದ ಐರೀನ್ ಡಿಸೋಜ ಅವರ ಅಂಗಾಂಗಗಳ ದಾನದ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ಸ್ಮರಣಾರ್ಥ, ಅದಕ್ಕೆ ಪ್ರೇರಣೆ ನೀಡಿದ ಅವರ ಪುತ್ರಿ ನೀತಾ ಪಿರೇರಾರನ್ನು ಸಮಾರಂಭದಲ್ಲಿ ಗೌರವಿಸಲಾಯಿತು.
ಪಾನ್ ಮಸಾಲ ನಿಷೇಧದಿಂದ ಅಡಿಕೆ ಬೆಳೆಗಾರರಿಗೆ ತೊಂದರೆ ಇಲ್ಲ
ಮಂಗಳೂರು: ಪಾನ್ ಮಸಾಲದಲ್ಲಿ ನಿಕೋಟಿನ್, ತಂಬಾಕು ಹಾಗೂ ಗುಟ್ಕಾ ಮಿಶ್ರಣ ಮಾಡಿ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಆದರೆ ಶುದ್ಧ ಪಾನ್ ಮಸಾಲ ಪ್ರತ್ಯೇಕವಾಗಿ ಬಂದರೆ ಯಾವುದೇ ತೊಂದರೆ ಇಲ್ಲ. ಈ ಕ್ರಮದಿಂದ ಅಡಿಕೆ ಬೆಳೆಗಾರರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ನೆಹರೂ ಮೈದಾನದಲ್ಲಿ ಶನಿವಾರ ಸುದ್ದಿಗಾರರ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದರು.
2014ರಲ್ಲಿ ನಾನು ಗುಟ್ಕಾ ನಿಷೇಧಿಸಿದಾಗಲೂ ಅಡಿಕೆ ಬೆಲೆ ಇಳಿಕೆಯಾಗಲಿದೆ ಎಂದು ಅಪಪ್ರಚಾರ ಮಾಡಲಾಗಿತ್ತು. ಆದರೆ ಆ ಬಳಿಕ ಅಡಿಕೆ ಧಾರಣೆ ಜಾಸ್ತಿಯಾಯಿತೇ ಹೊರತು ಕಡಿಮೆಯಾಗಲಿಲ್ಲ. ಈಗಲೂ ಅಡಿಕೆ ಬೆಳೆಗಾರರಿಗೆ ಅಥವಾ ವ್ಯಾಪಾರಿಗಳಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದರು.