ಬಂಟ್ವಾಳ ತಾಲೂಕಿನ ಚೆನ್ನೈತ್ತೋಡಿಯಲ್ಲಿ ಭಾನುವಾರ ಹಿಂದು ಸಂಗಮ ಕಾರ್ಯಕ್ರಮದಲ್ಲಿ ಆರೆಸ್ಸೆಸ್ಸ್ ದಕ್ಷಿಣ ಪ್ರಾಂತ ಕಾರ್ಯವಾಹ ಡಾ.ಜಯಪ್ರಕಾಶ್ ಮಾತನಾಡಿದರು. ಮುಕ್ತಾನಂದ ಶ್ರೀ, ಶಶಿಕಲಾ ಬಜಿರೆ, ಸುಬ್ರಹ್ಮಣ್ಯ ಭಟ್ ಇತರರಿದ್ದರು.
ವಾಮದಪದವು ಸಮೀಪದ ಚೆನ್ನೈತ್ತೋಡಿ ಮಂಡಲ ಹಿಂದು ಸಂಗಮ ಆಯೋಜನಾ ಸಮಿತಿ ವತಿಯಿಂದ ಭಾನುವಾರ ಆಯೋಜನೆಗೊಂಡಿದ್ದ ಹಿಂದು ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಭಾರತೀಯರ ಸಂಸ್ಕೃತಿ ಮೇಲೆ ಮತಾಂಧರು ಸತತ ದಾಳಿ ನಡೆಸಿದ್ದರೂ ಹಿಂದುತ್ವ ಭದ್ರವಾಗಿ ತಳವೂರಿರುವುದು ಭಾರತೀಯ ಸಂಸ್ಕೃತಿಯ ಪ್ರತೀಕ ಎಂದು ಅಭಿಪ್ರಾಯಪಟ್ಟರು.
ಯೋಗಶಿಕ್ಷಕಿ ಶಶಿಕಲಾ ಬಜಿರೆ ಯೋಗ ಮತ್ತು ಸೇವೆ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮ ಆರಂಭಕ್ಕೂ ಮೊದಲು ಇರ್ವತ್ತೂರು ಪದವಿನಿಂದ ಆಕರ್ಷಕ ಶೋಭಯಾತ್ರೆ ನಡೆಯಿತು.
ದೇಶದಲ್ಲಿ ಜಾತಿ ವ್ಯವಸ್ಥೆಗೆ ಬದಲಾಗಿ ದೇಶಭಕ್ತಿಗೆ ಪೂರಕವಾಗಿ ಹಿಂದುತ್ವ ಗಟ್ಟಿಯಾಗಬೇಕು.