ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಜಯರಾಮ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಡಾ.ವಾದಿರಾಜ, ಹರಿನಾರಾಯಣ ಆಸ್ರಣ್ಣ, ಅಕ್ಷತಾ ಶೆಟ್ಟಿ, ರಘುರಾಮ ಅಡ್ಯಂತ್ತಾಯ, ಕರುಣಾಕರ ಶೆಟ್ಟಿ, ರವೀಂದ್ರ ಪಟ್ಟೆ ಇದ್ದರು. 
ದಕ್ಷಿಣ ಕನ್ನಡ

ಜಗತ್ತಿಗೆ ಹಿಂದೂ ಸಮಾಜದ ಮಾರ್ಗದರ್ಶನ : ಡಾ.ವಾದಿರಾಜ

ಸೌಮ್ಯ ಆರ್
ಕಿನ್ನಿಗೋಳಿ: ಹಿಂದೂ ಸಂಗಮ ದೇಶಾದ್ಯಂತ 40 ಸಾವಿರ ಕಡೆಗಳಲ್ಲಿ ಬೇರೆ ಬೇರೆ ಹೆಸರಿನಿಂದ ನಡೆಯುತಿದೆ. ನಮ್ಮ ದೇಶಕ್ಕೆ ಅನೇಕ ಬಾರಿ ಪರಕೀಯರ ದಾಳಿ ಆಗಿದೆ, ಅಪಾರ ಸಂಪತ್ತು ದೋಚಿದ್ದಾರೆ, ಆದರೂ ನಾವು ಎದುರಿಸಿ ನಿಂತಿದ್ದೇವೆ. ಜಗತ್ತಿಗೆ ಮಾರ್ಗದರ್ಶನ ಕೊಟ್ಟ ಸಮಾಜ ನಮ್ಮದು, ಹಿಂದೂ ಸಮಾಜದ ಬಗ್ಗೆ ಹಿಂದೂಗಳೇ ಅರ್ಥ ಮಾಡಿಕೊಳ್ಳಬೇಕು ಎಂದು ಆರ್.ಎಸ್.ಎಸ್.ನ ವಿಭಾಗ ಕಾರ್ಯವಾಹಕ ಡಾ.ವಾದಿರಾಜ ಹೇಳಿದರು.
ಪಟ್ಟೆ ಜಾರಂದಾಯ ದೈವಸ್ಥಾನದ ಬಳಿ ಐಕಳ ಮಂಡಲದ ವತಿಯಿಂದ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.