ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಮಾತೆಯರಿಂದ ಗೋಪೂಜೆ ನಡೆಯಿತು. ಗ್ರಾಮ ವಿಕಾಸ ಮಂಗಳೂರು ವಿಭಾಗ ಸಂಯೋಜಕ ಜಿತೇಂದ್ರ, ಧಾರ್ಮಿಕ ಮಾರ್ಗದರ್ಶಕ ಮಾಧವ ಆಚಾರ್ಯ ಇಜ್ಜಾವು ಮೊದಲಾದವರಿದ್ದರು.  
ದಕ್ಷಿಣ ಕನ್ನಡ

ದೇಶದ ನಾಯಕರಿಂದ ಧರ್ಮ ಕಾರ್ಯ : ಜಿತೇಂದ್ರ

ಸೌಮ್ಯ ಆರ್
ನಮ್ಮ ದೇಶದ ಮೇಲೆ ಅದೆಷ್ಟೋ ದಾಳಿ ನಡೆದರೂ ಸಂಪತ್ತು ನಶಿಸಿದೆ. ಆದರೆ ನಮ್ಮ ಸಂಸ್ಕೃತಿ, ನಂಬಿಕೆ ನಾಶವಾಗಿಲ್ಲ. ಜಗತ್ತಿನ ಹಿತ ಕಾಪಾಡಿಕೊಂಡು ಜ್ಞಾನದ ಬೆಳಕು ನೀಡುವ ಧರ್ಮ ಕಾರ್ಯವನ್ನು ದೇಶ ಆಳುವ ನಾಯಕರು ಮಾಡುತ್ತಿದ್ದಾರೆ. ಜಗತ್ತು ಇಂತಹ ಸತ್‌ಚಿಂತನೆಯ ಕಾರ್ಯ ಮೆಚ್ಚಿಕೊಂಡಿದೆ ಎಂದು ಗ್ರಾಮ ವಿಕಾಸ ಮಂಗಳೂರು ವಿಭಾಗ ಸಂಯೋಜಕ ಜಿತೇಂದ್ರ ಹೇಳಿದರು.
ಕಡಬ ತಾಲೂಕು ಹಿಂದೂ ಸಂಗಮ ಆಯೋಜನಾ ಸಮಿತಿ ರಾಮಕುಂಜ ಮಂಡಲ ವತಿಯಿಂದ ಭಾನುವಾರ ಸಂಜೆ ರಾಮಕುಂಜದ ಗಣೇಶ್ ನಗರದಲ್ಲಿ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿಂದೂಗಳ ಮುಕ್ಕೋಟಿ ದೇವೆತೆಗಳಲ್ಲಿ ಗೋಮಾತೆ ಪೂಜೆ ಬಹಳ ಪ್ರಾಮುಖ್ಯತೆ ಪಡೆದಿದೆ. ಹಿರಿಯರು ಆಚರಿಸಿಕೊಂಡ ಬಂದ ಎಲ್ಲ ಧಾರ್ಮಿಕ ಆಚರಣೆಯಲ್ಲಿ ಹಿಂದುತ್ವ ಗಟ್ಟಿಗೊಳಿಸುವ ಶಕ್ತಿಯಿದೆ. ಹಿಂದುತ್ವ ನಮ್ಮ ಉಸಿರಾಗಬೇಕು.