ಎಡನೀರು ಮಠದ ಶ್ರೀ ಸಚ್ಚಿದಾನಂದ ಸ್ವಾಮೀಜಿ, ಸುಬ್ರಹ್ಮಣ್ಯ ಮಠದ ದಿವಾನ ಸುದರ್ಶನ ಜೋಯಿಸರು ಗೋಗ್ರಾಸ ನೀಡಿದರು. ಪ್ರಮುಖರಾದ ರವೀಂದ್ರ, ಅಶೋಕ್ ಕುಮಾರ್ ಮೂಲೆಮಜಲು, ನಾರಾಯಣ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಧರ್ಮ ಗಟ್ಟಿಯಾಗಬೇಕಾದರೆ ರಾಷ್ಟ್ರೀಯ ಪ್ರಜ್ಞೆ ದೃಢವಾಗಬೇಕು. ನಮ್ಮ ಸಮಾಜ ಸದೃಢವಾಗಬೇಕಾದರೆ ಧರ್ಮದ ತಿರುಳು ತಿಳಿಯಪಡಿಸುವ ಕೆಲಸ ನಡೆಯಬೇಕು. ಜನರಿಗೆ ಜಾಗೃತ ಮನೋಭಾವ ಅಭ್ಯುದಯವಾಗುವಂತೆ ಮಾಡುವುದು ಅಗತ್ಯ. ಭೇದ- ಭಾವ, ಮೇಲು- ಕೀಳು ಭಾವನೆ ತೊಲಗಬೇಕು. ನಾವೆಲ್ಲರೂ ಒಂದೇ ಎನ್ನುವ ಮನೋಭಾವನೆ ಮೊಳಕೆಯೊಡೆಯಬೇಕು ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಸ್ವಾಮೀಜಿ ಹೇಳಿದರು.
ಸುಬ್ರಹ್ಮಣ್ಯದ ಶ್ರೀ ಸುಬ್ರಹ್ಮಣ್ಯ ಮಠದ ಆವರಣದಲ್ಲಿ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜು ಸಂಚಾಲಕ ರವೀಂದ್ರ ಮಾತನಾಡಿದರು. ಕಾರ್ಯಕ್ರಮ ಆಯೋಜನಾ ಸಮಿತಿ ಸದಸ್ಯ ಅಶೋಕ್ ಕುಮಾರ್ ಮೂಲೆಮಜಲು, ಹಿರಿಯ ಸಮಾಜ ಚಿಂತಕ ನಾರಾಯಣ ಭಟ್, ಊರ ಗೌಡರಾದ ನಾರಾಯಣ ಮಾನಾಡು, ಪುಷ್ಪಾವತಿ ಬಾಲಾಡಿ, ಗುರುಪ್ರಸಾದ್ ಮೆಲ್ನಾಡು, ರಮೇಶ್ ಕೋನಡ್ಕ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೇವಾ ಪ್ರತಿನಿಧಿ ಹರಿಣಾಕ್ಷಿ ಮಾಣಿಬೆಟ್ಟು, ಪ್ರಗತಿಪರ ಕೃಷಿಕ ಗೋಪಾಲಕೃಷ್ಣ ಭಟ್, ಒಡಿಯೂರು ಸ್ವ ಸಹಾಯ ಸಂಘಗಳ ಸೇವಾ ಪ್ರತಿನಿಧಿ ಲತಾ ಪ್ರಸಾದ್ ನೂಚಿಲ, ನಿವೃತ್ತ ಮುಖ್ಯಶಿಕ್ಷಕಿ ಲೀಲಾವತಿ ಪರಮಲೆ, ಪ್ರಮುಖರಾದ ರೇಗಪ್ಪ ಗೌಡ ಪುಂಡಿಗದ್ದೆ, ವೀಣಾ ಪಳ್ಳಿಗದ್ದೆ, ಚಂದ್ರ ಗುಂಡಡ್ಕ ಇದ್ದರು.
ರೋಹಿತ್ ಕುಲ್ಕುಂದ ಸ್ವಾಗತಿಸಿದರು. ದಿಲೀಪ್ ಉಪ್ಪಳಿಕೆ ಪ್ರಸ್ತಾವನೆಗೈದರು. ದಿನೇಶ್ ಸಂಪ್ಯಾಡಿ ವಂದಿಸಿದರು. ಮೋಹಿತ್ ಜೇನುಕೋಡಿ, ಕೀರ್ತಿ ಸುಬ್ರಹ್ಮಣ್ಯ ಕಾರ್ಯಕ್ರಮ ನಿರೂಪಿಸಿದರು.
2047ರಲ್ಲಿ ದೇಶ ವಿಕಸಿತ ಭಾರತವಾಗುತ್ತದೆ. ವೇದ, ಉಪನಿಷತ್ತು, ರಾಮಾಯಣ, ಮಹಾಭಾರತ ಮೊದಲಾದ ಗ್ರಂಥಗಳು ನಮ್ಮ ದೇಶದ ಸಂಪತ್ತು. ನಮ್ಮ ದೇಶದ ಸಂಪತ್ತು, ಕೌಂಟುಬಿಕ ಮೌಲ್ಯಗಳ ಸಂರಕ್ಷಣೆ, ಸಾಮರಸ್ಯ, ಸ್ವದೇಶಿ ಭಾವನೆ, ಪರಿಸರ ಕಾಳಜಿ, ಜೀವನದಲ್ಲಿ ಶಿಸ್ತು ನಾವು ಪಾಲಿಸಬೇಕಾದ ನಿಯಮ.