ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದಲ್ಲಿ ಈ ಬಾರಿ ಶಿವರಾತ್ರಿಯಂದು ವಿಶೇಷವಾಗಿ ಶಿವ ಪಂಚಾಕ್ಷರಿ ಜಪಯಜ್ಞ ನಡೆಸಲು ಸಂಕಲ್ಪಿಸಿದ್ದು, ಇದರ ಸೇವಾ ರಶೀದಿಯನ್ನು ಬಿಡುಗಡೆಗೊಳಿಸಲಾಯಿತು. 
ದಕ್ಷಿಣ ಕನ್ನಡ

ಹಿಂದೂ ಧಾರ್ಮಿಕ ವಿಧಿವಿಧಾನದಿಂದ ಸಾಮಾಜಿಕ ಹಿತ : ಈಶ್ವರ ಭಟ್

ಸೌಮ್ಯ ಆರ್
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದಲ್ಲಿ ಈ ಬಾರಿ ಶಿವರಾತ್ರಿಯಂದು ವಿಶೇಷವಾಗಿ ಶಿವ ಪಂಚಾಕ್ಷರಿ ಜಪಯಜ್ಞ ನಡೆಸಲು ಸಂಕಲ್ಪಿಸಿದ್ದು, ಇದರ ಸೇವಾ ರಶೀದಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ರಾಧಾಕೃಷ್ಣ ನಾಕ್ ಮಾತನಾಡಿ, ನೇತ್ರಾವತಿ ನದಿಗೆ ಬಿಳಿಯೂರು ಎಂಬಲ್ಲಿ ಅಣೆಕಟ್ಟು ನಿರ್ಮಿಸಿದ ಕಾರಣ ಹಿನ್ನೀರಿನಿಂದಾಗಿ ದೇವಾಲಯದ ಬಳಿ ನೇತ್ರಾವತಿ ನದಿಯಲ್ಲಿದ್ದ ಉದ್ಭವಲಿಂಗ ಮುಳುಗಡೆಯಾಗಿದೆ. ಆದ್ದರಿಂದ ಭಕ್ತರಿಗೆ ಉದ್ಭವಲಿಂಗಕ್ಕೆ ಪೂಜೆ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಈ ಬಾರಿ ಶಿವರಾತ್ರಿಯಂದು ದೇವಾಲಯದಲ್ಲಿ ಶಿವ ಪಂಚಾಕ್ಷರಿ ಜಪ ಯಜ್ಞ ನಡೆಸಲು ಸಂಕಲ್ಪಿಸಲಾಗಿದೆ. ಭಕ್ತರು ಇದರಲ್ಲಿ ಸಾಮೂಹಿಕವಾಗಿ ಪಾಲ್ಗೊಳ್ಳಲು ಅವಕಾಶವಿದೆ. ಧಾರ್ಮಿಕ ವಿಧಿವಿಧಾನಕ್ಕೆ ಗಂಭೀರತೆ ಬರಲೆಂದು ಒಂದು ಜಪಯಜ್ಞಕ್ಕೆ ಸೇವಾ ರಶೀದಿ ಇರಲಿದೆ ಎಂದರು.
ಕ್ಷೇತ್ರದ ಪುರೋಹಿತರಾದ ಶಂಕರನಾರಾಯಣ ಭಟ್, ಮಧುಸೂಧನ ಭಟ್ ದೇವತಾ ಪ್ರಾರ್ಥನೆ ನೆರವೇರಿಸಿದರು. ದೇವಾಲಯ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ದೇವಿದಾಸ್ ರೈ, ಡಾ.ರಮ್ಯಾ ರಾಜಾರಾಂ, ವೆಂಕಪ್ಪ ಪೂಜಾರಿ ಮರುವೇಲು, ಸೋಮನಾಥ, ಉದ್ಯಮಿಗಳಾದ ಹರೀಶ್ ಶೆಟ್ಟಿ, ಸುಂದರ ಗೌಡ ಅರ್ಬಿ, ಪ್ರಮುಖರಾದ ಜಗದೀಶ ಶೆಟ್ಟಿ ಕೆ., ಯು.ಸುಧಾಕರ ಶೆಟ್ಟಿ, ಆದೇಶ್ ಶೆಟ್ಟಿ, ಸುರೇಶ್ ನಟ್ಟಿಬೈಲ್, ಗೋಪಾಲ ಹೆಗ್ಡೆ, ದೇವಾಲಯದ ವ್ಯವಸ್ಥಾಪಕ ವೆಂಕಟೇಶ ರಾವ್, ಸಿಬ್ಬಂದಿ ಕೃಷ್ಣಪ್ರಸಾದ್ ಬಡಿಲ, ಪದ್ಮನಾಭ, ಕೃಷ್ಣಪ್ರಸಾದ್ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.