ಸಾಂದರ್ಭಿಕ ಚಿತ್ರ 
ದಕ್ಷಿಣ ಕನ್ನಡ

ಕೆಮ್ಮತ್ತಡ್ಕಕ್ಕೆ ಲಗ್ಗೆಯಿಟ್ಟ ಕಾಡಾನೆ ಹಿಂಡು

ಬಾಳೆ ಕೃಷಿ ಧ್ವಂಸ

ಪುತ್ತೂರು ಗ್ರಾಮಾಂತರ: ನೆಟ್ಟಣಿಗೆ ಮುಡ್ನೂರು ಗ್ರಾಮ ಮತ್ತು ಕೇರಳದ ಗಡಿಭಾಗದಲ್ಲಿರುವ ಕೆಮ್ಮತ್ತಡ್ಕ ವ್ಯಾಪ್ತಿಗೆ ಕಾಡಾನೆಗಳ ಹಿಂಡು ಲಗ್ಗೆಯಿಟ್ಟು ಕೃಷಿ ಹಾನಿ ಮಾಡಿದೆ.

ಕೆಮ್ಮತ್ತಡ್ಕದ ವಾಮನ ಗೌಡ ಅವರ ತೋಟಕ್ಕೆ ಶನಿವಾರ ತಡರಾತ್ರಿಯ ವೇಳೆ ಒಂದು ಮರಿ ಕಾಡಾನೆಯ ಸಹಿತ ಐದಾರು ಕಾಡಾನೆಗಳಿದ್ದ ಹಿಂಡು ಲಗ್ಗೆಯಿಟ್ಟು ಅವರ ತೋಟದಲ್ಲಿದ್ದ ಅಪಾರ ಪ್ರಮಾಣದ ಬಾಳೆ ಕೃಷಿಗಳನ್ನು ಧ್ವಂಸಗೊಳಿಸಿದೆ. ಅಲ್ಲದೆ 3 ಅಡಿಕೆ ಮತ್ತು 2 ತೆಂಗಿನ ಸಸಿಗಳನ್ನು ಕೂಡ ಹಾನಿಗೊಳಿಸಿರುವುದಾಗಿ ತಿಳಿದು ಬಂದಿದೆ.