ಸಮನ್ವಯ ಶಿಕ್ಷಣ ಕಾರ್ಯಾಗಾರವನ್ನು ಮಂಗಳೂರು ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್.ಈಶ್ವರ್ ಉದ್ಘಾಟಿಸಿದರು. ಅಂಗವಿಕಲರ ಕಲ್ಯಾಣ ಸಂಸ್ಥೆ ಕಾರ್ಯದರ್ಶಿ ಪ್ರೊ.ರಾಜೇಂದ್ರ ಶೆಟ್ಟಿ, ವಾಕ್ ಶ್ರವಣ ತಜ್ಞ ಗುರುಪ್ರಸಾದ್, ಮುಖ್ಯಶಿಕ್ಷಕ ರಮೇಶ್ ಆಚಾರ್ಯ ಮೊದಲಾದವರಿದ್ದರು.
ಗುರುಪುರ: ಇಂಥ ಕಾರ್ಯಾಗಾರಗಳಿಂದ ವಿದ್ಯಾರ್ಥಿ ಜೀವನಕ್ಕೆ ಹೆಚ್ಚು ಲಾಭವಿದ್ದು, ಭವಿಷ್ಯದ ಉತ್ತಮ ಪ್ರಜೆಗಳಾಗಲು ಸಹಕಾರಿ ಎಂದು ಮಂಗಳೂರು ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್.ಈಶ್ವರ್ ಹೇಳಿದರು.
ವಾಮಂಜೂರಿನ ಎಸ್‌ಡಿಎಂ ಮಂಗಳಜ್ಯೋತಿ ಸಮಗ್ರ ಶಾಲೆಯಲ್ಲಿ ಎರಡು ದಿನಗಳ ಸಮನ್ವಯ ಶಿಕ್ಷಣ ಕಾರ್ಯಾಗಾರ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಅಂಗವಿಕಲರ ಕಲ್ಯಾಣ ಸಂಸ್ಥೆ ಕಾರ್ಯದರ್ಶಿ ಪ್ರೊ.ರಾಜೇಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಾಕ್ ಶ್ರವಣ ತಜ್ಞ ಗುರುಪ್ರಸಾದ್, ಶಾಲೆಯ ವಿವಿಧ ಚಟುವಟಿಕೆಗಳ ಮಾಹಿತಿ ನೀಡಿದರು. ಸಮನ್ವಯ ಶಿಕ್ಷಣದ ಬಗ್ಗೆ ಪ್ರೌಢಶಾಲಾ ಮುಖ್ಯಶಿಕ್ಷಕ ರಮೇಶ್ ಆಚಾರ್ಯ, ಸಮನ್ವಯ ಶಿಕ್ಷಣದಲ್ಲಿ ಶಿಕ್ಷಕರ ಜವಾಬ್ದಾರಿ ಬಗ್ಗೆ ವಿನತಾ ವಿಷಯ ಮಂಡಿಸಿದರು.
ಕೆಎಂಸಿ ನಿವೃತ್ತ ವಾಕ್ ಶ್ರವಣ ವಿಭಾಗದ ಮುಖ್ಯಸ್ಥ ಡಾ.ಜಯಶ್ರೀ, ಮಕ್ಕಳಲ್ಲಿ ನ್ಯೂನತೆ ಪತ್ತೆಹಚ್ಚುವ ಹಾಗೂ ಶಾಲಾ ಹಂತದಲ್ಲಿ ಸಮನ್ವಯಗೊಳಿಸುವಿಕೆ, ಡಾ.ಸೋಮಶೇಖರ ಕಲಿಕಾ ನ್ಯೂನತೆ ಮಕ್ಕಳ ಲಕ್ಷಣಗಳು ಹಾಗೂ ತರಗತಿ ನಿರ್ವಹಣೆ ಮಾಹಿತಿ ನೀಡಿದರು.
ಶನಿವಾರ ಗುರುಪ್ರಸಾದ್ ಎಂ.ಎಸ್.ಬೌದ್ಧಿಕ್ ನ್ಯೂನತೆ ಹಾಗೂ ಆಟಿಸಂನ ಲಕ್ಷಣ, ಪರಿಹಾರ ಮತ್ತು ವಿವಿಧ ನ್ಯೂನತೆಯುಳ್ಳ ವಿದ್ಯಾರ್ಥಿಗಳ ಬಗ್ಗೆ ವಿಷಯ ಮಂಡಿಸಿದರು.
ಸಮಾರೋಪದಲ್ಲಿ ಪಚ್ಚನಾಡಿ ವಾರ್ಡ್ ನಿಕಟಪೂರ್ವ ಕಾರ್ಪೊರೇಟ್ ಸಂಗೀತಾ ಆರ್.ನಾಯಕ್, ಸವಿತಾ ರಾವ್ ಇದ್ದರು. ಎಲ್ಲ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.