ಮೂಲ್ಕಿ: ಅಂಗರಗುಡ್ಡೆ ಶ್ರೀರಾಮ ಫ್ರೆಂಡ್ಸ್ ಹಾಗೂ ‘ಸಹಾಯಹಸ್ತ’ ಆಶ್ರಯದಲ್ಲಿ ಅಂಗರಗುಡ್ಡೆ ಶ್ರೀರಾಮ ಭಜನಾ ಮಂಡಳಿ, ಬಜ್ಜೆ-ಕಿಲ್ಪಾಡಿ ವಲಯ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಹಳೆಯಂಗಡಿ ಮಹಾಶಕ್ತಿ ಕೇಂದ್ರ ಬಿಜೆಪಿ ಸಹಯೋಗದಲ್ಲಿ ಬಿಜೆಪಿ ನಾಯಕ ದಿ.ಸುಖಾನಂದ ಶೆಟ್ಟಿ, ಪ್ರೇಮ್, ದಿನೇಶ್ ಅವರ ಸ್ಮರಣಾರ್ಥ ಮಂಗಳೂರು ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಸಹಭಾಗಿತ್ವದಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಹಾಗೂ ಇಎನ್‌ಟಿ ತಪಾಸಣಾ ಉಚಿತ ಶಿಬಿರ ಸೋಮವಾರ ಬೆಳಗ್ಗೆ ಅಂಗರಗುಡ್ಡೆ ಶ್ರೀರಾಮ ಭಜನಾ ಮಂದಿರ ವಠಾರದಲ್ಲಿ ನಡೆಯಿತು.
ದ.ಕ. ಜಿಲ್ಲಾ ಬಿ.ಜೆ.ಪಿ. ಸದಸ್ಯ ಈಶ್ವರ ಕಟೀಲು, ಜಿಪಂ ಮಾಜಿ ಸದಸ್ಯೆ ಕಸ್ತೂರಿ ಪಂಜ, ಕಿನ್ನಿಗೋಳಿ ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುನೀಲ್ ಆಳ್ವ, ಶ್ರೀಕ್ಷೇತ್ರ ಧ.ಗ್ರಾ.ಯೋ. ಸ್ವಸಹಾಯ ಗುಂಪಿನ ಲಲಿತಾ, ತಾ.ಪಂ. ಮಾಜಿ ಸದಸ್ಯ ದಿವಾಕರ ಕರ್ಕೇರ, ಬಿಜೆಪಿ ಹಳೆಯಂಗಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಲಕ್ಷ್ಮಣ ಸಾಲ್ಯಾನ್, ಉದ್ಯಮಿ ತಾರಾನಾಥ ದೇವಾಡಿಗ ಅಂಗರಗುಡ್ಡೆ, ಶ್ರೀರಾಮ ಭಜನಾ ಮಂಡಳಿ ಅಧ್ಯಕ್ಷ ಸಂಪತ್‌ಕುಮಾರ್, ಮಹಿಳಾ ಮಂಡಳಿ ಅಧ್ಯಕ್ಷೆ ಅನಿತಾ ಶೆಟ್ಟಿ, ದಿ.ಸುಖಾನಂದ ಶೆಟ್ಟಿ ಅಭಿಮಾನಿ ಬಳಗದ ಸುಧೀರ್ ಶೆಟ್ಟಿ, ಪ್ರವೀಣ್ ಶೆಟ್ಟಿ, ಜೀವನ್ ಶೆಟ್ಟಿ ಹಾಗೂ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು. ಸತೀಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಬೃಹತ್ ಆರೋಗ್ಯ ಶಿಬಿರ ನಡೆಯಿತು.