ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಅರ್ಚಕ ನವೀನ್ ಶಾಂತಿ ಮಣಿನಾಲ್ಕೂರು ಮನೆಯಲ್ಲಿ ಗುರುತತ್ವವಾಹಿನಿ 62ನೇ ಮಾಲಿಕೆಯ ಗುರುಸಂದೇಶ ಕಾರ್ಯಕ್ರಮ ನಡೆಯಿತು.  
ದಕ್ಷಿಣ ಕನ್ನಡ

ಯುವವಾಹಿನಿಯಿಂದ ರಚನಾತ್ಮಕ ಕಾರ್ಯ : ಲಕ್ಷ್ಮಣ್ ಶಾಂತಿ

ಬಂಟ್ವಾಳ: ಸಮಾಜದ ಚಿಂತನೆಗೆ ಹೊಸ ದಿಕ್ಕು ನೀಡಿದ ಯುವವಾಹಿನಿ, ಯುವಶಕ್ತಿಯನ್ನು ರಚನಾತ್ಮಕ ಕಾರ್ಯಗಳಿಗೆ ಒಗ್ಗೂಡಿಸುತ್ತದೆ. ಬ್ರಹ್ಮಶ್ರೀ ನಾರಾಯಣ ಗುರುಗಳ ಸಮಾನತೆ, ಶಿಕ್ಷಣ ಮತ್ತು ಮಾನವತೆಯ ಸಂದೇಶವನ್ನು ಮನೆ ಮನೆಗಳಿಗೆ ತಲುಪಿಸುವ ಪ್ರಯತ್ನವನ್ನು ಮುಂದುವರಿಸುತ್ತಿದೆ ಎಂದು ಕುದ್ರೋಳಿ ಗೋಕರ್ಣ ಕ್ಷೇತ್ರದ ಪ್ರಧಾನ ತಂತ್ರಿ ಲಕ್ಷ್ಮಣ್ ಶಾಂತಿ ಹೇಳಿದರು.

ಯುವವಾಹಿನಿ ಬಂಟ್ವಾಳ ಘಟಕ ಆಶ್ರಯದಲ್ಲಿ ಭಾನುವಾರ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಅರ್ಚಕ ನವೀನ್ ಶಾಂತಿ ಮಣಿನಾಲ್ಕೂರು ಮನೆಯಲ್ಲಿ ನಡೆದ ಗುರುತತ್ವವಾಹಿನಿ 62ನೇ ಮಾಲಿಕೆಯಲ್ಲಿ ಗುರುಸಂದೇಶ ನೀಡಿದರು.

ಸಾಯಿ ಶಾಂತಿ ಕೋಕಲ, ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಅರ್ಚಕರಾದ ಪ್ರವೀಣ್ ಶಾಂತಿ, ನವೀನ್ ಶಾಂತಿ ಅಡ್ಯಾಲ್, ಪುರುಷೋತ್ತಮ ಶಾಂತಿ, ಯುವವಾಹಿನಿ ಬಂಟ್ವಾಳ ಘಟಕದ ಕಾರ್ಯದರ್ಶಿ ಮಧುಸೂದನ್ ಮಧ್ವ, ನಿರ್ದೇಶಕ ಮಹೇಶ್ ಬೊಳ್ಳಾಯಿ, ಪ್ರಜಿತ್ ಅಮಿನ್ ಏರಮಲೆ, ಸಂಘಟನಾ ಕಾರ್ಯದರ್ಶಿ ಯಶೋಧರ ಕಡಂಬಳಿಕೆ, ಸದಸ್ಯರಾದ ಪ್ರಶಾಂತ್ ಅಮೀನ್ ಏರಮಲೆ, ವ್ನಿೇಶ್ ಬೊಳ್ಳಾಯಿ, ನವೀನ್ ಕುಡ್ಮೇರು, ಯತೀಶ್ ಬೊಳ್ಳಾಯಿ, ಹರಿಣಾಕ್ಷಿ ನಾವೂರು, ಮಾಜಿ ಅಧ್ಯಕ್ಷರಾದ ಪ್ರೇಮನಾಥ ಕೆ., ಅರುಣ್ ಕುಮಾರ್, ನಾಗೇಶ್ ಪೊನ್ನೋಡಿ ಮತ್ತಿತರರಿದ್ದರು.

ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ನಾಗೇಶ್ ಪೂಜಾರಿ ನೈಬೆಲು ಸ್ವಾಗತಿಸಿದರು. ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಹರೀಶ್ ಸಾಲ್ಯಾನ್ ಅಜೆಕಲ ವಂದಿಸಿದರು.