ದೇವಸ್ಥಾನದ ನೂತನ ಅನ್ನಛತ್ರದ ಭೂಮಿಪೂಜೆ ಕ್ಷೇತ್ರದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ನಡೆಯಿತು. ಕ್ಷೇತ್ರದ ಆಡಳಿತ ಮೊಕ್ತೇಸರ ಚಂದ್ರಹಾಸ ಪೂಂಜ ಕಿಲ್ಲೂರುಗುತ್ತು, ಮಂಜುಳಾ ಸುಧಾರಾಮ್ ರೈ ಕೊಪ್ಪರಿಗೆ, ಸಂತೋಷ್ ಕುಮಾರ್ ರೈ ಬೋಳಿಯಾರ್ ಇನ್ನಿತರರು ಉಪಸ್ಥಿತರಿದ್ದರು.  
ದಕ್ಷಿಣ ಕನ್ನಡ

ಧಾರ್ಮಿಕ ಕ್ಷೇತ್ರ, ಧರ್ಮಾಭಿವೃದ್ಧಿಗೆ ಬೇಕು ಒಗ್ಗಟ್ಟು : ಲೋಕೇಶ್ ಶೆಟ್ಟಿ ಚಿಂತನೆ

ಉಳ್ಳಾಲ: ಜಾತಿ ಭೇದ, ರಾಜಕೀಯ ಮನೆಯಲ್ಲಿ ಹಾಗೂ ಆಯಾ ಸಂಘಟನೆಗಳಿಗೆ ಸೀಮಿತವಾಗಿರಲಿ. ಧರ್ಮ ಹಾಗೂ ಕ್ಷೇತ್ರದ ಅಭಿವೃದ್ಧಿ ವಿಚಾರ ಬಂದಾಗ ಒಗ್ಗಟ್ಟು ಅಗತ್ಯ. ಪೆಟ್ಟು ತಿನ್ನುವ ಬದಲು ಅದಕ್ಕಿಂತ ಮೊದಲೇ ಎಚ್ಚೆತ್ತುಕೊಳ್ಳುವುದು ಅಗತ್ಯ ಹಿಂದೂ ಸಮಾಜಕ್ಕಿದೆ ಎಂದು ಬಂಟವಾಳ ಬಂಟರ ಸಂಘದ ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಕುಳ ಹೇಳಿದರು.
ರಾಜ್ಯ ಗಾಣಿಗ ನಿಗಮದ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್ ಮಾತನಾಡಿ, ಯಾವುದೇ ಕ್ಷೇತ್ರದಲ್ಲಿ ನಿತ್ಯ ಅನ್ನದಾನ ಸೇವೆ ಸವಾಲಿನ ವಿಚಾರ. ಈ ಕಾರ್ಯ ಜನರ ಸಹಕಾರ, ದೇವರ ಅನುಗ್ರಹ, ಆಶೀರ್ವಾದದಿಂದ ಸಾಧ್ಯವೇ ಹೊರತು, ಅಹಂಭಾವದಿಂದ ಒಬ್ಬನಿಂದ ಮಾತ್ರ ಅಸಾಧ್ಯ. ದೇವರಿಗೆ ನೀಡುವ ಸೇವೆ ಎಂದಿಗೂ ನಿಷ್ಟ್ರಯೋಜಕ ಅಲ್ಲ ಎಂದರು.
ಕ್ಷೇತ್ರದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಭೂಮಿಪೂಜೆ ನಡೆಯಿತು. ಆಡಳಿತ ಮೊಕ್ತೇಸರ ಚಂದ್ರಹಾಸ ಪೂಂಜ ಕಿಲ್ಲೂರುಗುತ್ತು ಅಧ್ಯಕ್ಷತೆ ವಹಿಸಿದ್ದರು. ರತ್ನಾಕರ ಭಂಡಾರಿ ಕಿಲ್ಲೂರುಗುತ್ತು, ಮಂಗಳೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ರವಿರಾಜ್ ಶೆಟ್ಟಿ ನಿಟ್ಟೆಗುತ್ತು, ಬಾರ್ಕೂರು ಮಹಾಸಂಸ್ಥಾನದ ಅಧ್ಯಕ್ಷ ಆನಂದ ಶೆಟ್ಟಿ ಕಾವೂರು, ದೇರಳಕಟ್ಟೆ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದ ಆಡಳಿತ ಮೊಕ್ತೇಸರ ಚಂದ್ರಹಾಸ ಅಡ್ಯಂತಾಯ, ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ನಿಕಟಪೂರ್ವ ಅಧ್ಯಕ್ಷ ಸಂತೋಷ್ ಕುಮಾರ್ ರೈ, ಬ್ರಹ್ಮಶ್ರೀ ಬಿಲ್ಲವ ವೇದಿಕೆ ಅಧ್ಯಕ್ಷ ಕೆ.ಟಿ.ಸುವರ್ಣ, ಚಿತ್ರನಟ ಶಿವರಾಜ್ ಶೆಟ್ಟಿ, ರತ್ನಾಕರ ಕಾವ ಕುತ್ತಾರುಗುತ್ತು, ಮಂಜುಳಾ ಸುಧಾರಾಮ್ ರೈ ಕೊಪ್ಪರಿಗೆ, ಹಿರಿಯರಾದ ವಿಶ್ವನಾಥ ಕಿಲ್ಲೂರುಗುತ್ತು, ಹರೇಕಳ ಸಂಪಿಗೆದಡಿ ಶ್ರೀ ಅರ್ಧನಾರೀಶ್ವರ ದೇವಸ್ಥಾನದ ಮಹಾಪ್ರಬಂಧಕ ಮಹಾಬಲ ಹೆಗ್ಡೆ ದೆಬ್ಬೇಲಿಗುತ್ತು ಉಪಸ್ಥಿತರಿದ್ದರು.

ಅತ್ಯಂತ ಪುರಾತನ ಕ್ಷೇತ್ರ 500 ವರ್ಷ ಬಳಿಕ ಜೀರ್ಣೋದ್ಧಾರಗೊಂಡು ಪೂಜೆ ನೋಡುವ ಭಾಗ್ಯ ಭಕ್ತರಿಗೆ ಲಭಿಸಿದೆ. ಮುಂದಿನ ವರ್ಷ ಬ್ರಹ್ಮಕಲಶ ನಡೆಸುವ ಅಭಿಲಾಷೆ ಇದ್ದು ರಾಜಗೋಪುರ, ತೇರು, ಕೊಡಿಮರ, ಪಲ್ಲಕ್ಕಿ ವ್ಯವಸ್ಥೆ ವರ್ಷದೊಳಗೆ ನಡೆಯಬೇಕಿದೆ. ಆರ್ಥಿಕವಾಗಿ ಹಿಂದುಳಿದ ಗ್ರಾಮವಾಗಿದ್ದು ಕ್ಷೇತ್ರಾಭಿವೃದ್ಧಿಗೆ ದಾನಿಗಳ ಸಹಕಾರ ಅಗತ್ಯ.