ಕುಟಿನೋಪಿನಡ್ಕ ಶಾಲೆಯಲ್ಲಿ 2023ರ ಅಕ್ಟೋಬರ್ ತಿಂಗಳಲ್ಲಿ ನಡೆದಿದ್ದ ಕಾರ್ಯಕ್ರಮಕ್ಕೆ ಹೋಗಿದ್ದ ಶಾಸಕರನ್ನು ಸ್ಥಳೀಯರು ಮುಳಿಯಡ್ಕ ಸೇತುವೆಯ ಬಳಿಗೆ ಕರೆದುಕೊಂಡು ಹೋಗಿ ಸಮಸ್ಯೆಯ ಕುರಿತು ಗಮನ ಸೆಳೆದಿದ್ದರು. ಸೇತುವೆಯನ್ನು ವೀಕ್ಷಣೆ ಮಾಡಿದ ಶಾಸಕರು ಹೊಸ ಸೇತುವೆ ನಿರ್ಮಾಣದ ಭರವಸೆ ನೀಡಿದ್ದರು. ಇದೀಗ ಅವರು ಅನುದಾನ ಒದಗಿಸುವ ಮೂಲಕ ಭರವಸೆ ಈಡೇರಿಸಿದ್ದಾರೆ.
‘ವಿಜಯವಾಣಿ’ ಸಮಗ್ರ ವರದಿ
ಕಿರಿದಾದ ಮತ್ತು ಶಿಥಿಲಾವಸ್ಥೆಯಲ್ಲಿರುವ ಮುಳಿಯಡ್ಕ ಸೇತುವೆಯಿಂದಾಗಿ ಜನತೆಗಾಗುತ್ತಿರುವ ಸಮಸ್ಯೆಯ ಕುರಿತು ಹಾಗೂ ಹೊಸ ಸೇತುವೆ ನಿರ್ಮಾಣದ ಅಗತ್ಯತೆಯ ಹಾಗೂ ಜನರ ಬೇಡಿಕೆಯ ಕುರಿತು ‘ವಿಜಯವಾಣಿ’ ಪತ್ರಿಕೆ ಸಮಗ್ರ ವರದಿ ಪ್ರಕಟಿಸಿ ಸಂಬಂಧಪಟ್ಟವರ ಗಮನ ಸೆಳೆಯುವ ಕೆಲಸ ಮಾಡಿತ್ತು.
ಯಾವತ್ತೋ ಈ ಸೇತುವೆಯ ನಿರ್ಮಾಣ ಆಗಬೇಕಿತ್ತು, ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ನನೆಗುದಿಗೆ ಬಿದ್ದಿರಬಹುದು. ತನ್ನ ಕ್ಷೇತ್ರದಲ್ಲಿ ಹಲವಾರು ಸೇತುವೆಯ ಬೇಡಿಕೆಯಿದ್ದು, ಹಂತ ಹಂತವಾಗಿ ಅನುದಾನ ನೀಡುವ ಮೂಲಕ ಜನ ಬೇಡಿಕೆಯನ್ನು ಒಂದೊಂದಾಗಿ ಈಡೇರಿಸಲಾಗುತ್ತಿದೆ. ಮುಳಿಯಡ್ಕ ಸೇತುವೆ ವಿಚಾರದಲ್ಲಿ 2023ರಲ್ಲಿ ಅಲ್ಲಿನ ಜನತೆಗೆ ಕೊಟ್ಟ ಮಾತನ್ನು ಇದೀಗ ಈಡೇರಿಸಿದ್ದೇನೆ.