ಹೊಂಡಗಳಿಗೆ ಮಣ್ಣು ಹಾಕಿ ಮುಚ್ಚಿದ ಇಸಾಕ್ ಕುದುಲೂರು. 
ದಕ್ಷಿಣ ಕನ್ನಡ

ಹೊಂಡ ಗುಂಡಿ ಮುಚ್ಚಲು ಏಕಾಂಗಿ ಶ್ರಮದಾನ : ಗೋಳಿತ್ತಡಿ- ಕುದುಲೂರು ರಸ್ತೆ ಸಮಸ್ಯೆಗೆ ಮುಕ್ತಿ ನೀಡಿದ ಇಸಾಕ್ ಕುದುಲೂರು

ಗೋಳಿತ್ತಡಿಯಿಂದ ಕುದುಲೂರುವರೆಗೆ ಹೊಂಡ ಗುಂಡಿಗಳಿಂದಾಗಿ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿರುವುದನ್ನು ಮನಗಂಡು ಮಣ್ಣು ಹಾಕಿ ಮುಚ್ಚಲು ಮುಂದಾದೆ. ಈ ಕೆಲಸದಲ್ಲಿ ಯಾವುದೇ ಫಲಾಪೇಕ್ಷೆಯಿಲ್ಲ. ಜನರಿಗೋಸ್ಕರ ಒಳ್ಳೆಯ ಕಾರ್ಯ ಮಾಡಿದರೆ ದೇವರ ಅನುಗ್ರಹವಿರುತ್ತದೆ ಎನ್ನುವ ನಂಬಿಕೆಯಿದೆ. ಮಣ್ಣು ಸವೆದು ಹೋಗುವ ತನಕವಾದರೂ ಸುಗಮ ಸಂಚಾರಕ್ಕೆ ತೊಂದರೆಯಾಗದು ಎನ್ನುವ ತೃಪ್ತಿಯಿದೆ.