ಮಂಗಳೂರು: ಅತ್ತಾವರ ಫ್ಲಾೃಟ್ವೊಂದರ ಅಡುಗೆ ಮನೆಯಲ್ಲಿ ಅಡಗಿಸಿಟ್ಟ 15.30 ಲಕ್ಷ ರೂ. ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ಗಳನ್ನು ಕಳವಾಗಿರುವ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೂರುದಾರರು ಚಿನ್ನಾಭರಣವಿದ್ದ ಬ್ಯಾಗ್ನ್ನು ತಮ್ಮ ್ಲ್ಯಾಟ್ನ ಅಡುಗೆ ಕೋಣೆಯಲ್ಲಿ ಒವೆನಲ್ಲಿಟಿದ್ದರು. ಸೆ.30ರಂದು ದೂರುದಾರರು ಮತ್ತು ಅವರ ಪತ್ನಿ ಕಾರ್ಯನಿಮಿತ್ತ ಮೈಸೂರಿಗೆ ತೆರಳಿದ್ದರು. ನ.9ರಂದು ಪಿರ್ಯಾದಿದಾರರ ಹೆಂಡತಿಯು ರಿಂಗ್ ಒಂದನ್ನು ಕೇಳಿದ್ದು, ಆ ಸಮಯ ಚಿನ್ನ ಇಟ್ಟಿರುವ ಬ್ಯಾಗ್ನನ್ನು ಹುಡುಕಿ ನೋಡಿದಾಗ ಬ್ಯಾಗ್ ಇರಲಿಲ್ಲ. ಮನೆಯ ಎಲ್ಲಿ ಜಾಲಾಡಿದರೂ ಚಿನ್ನಾಭರಣ ಬ್ಯಾಗ್ ಪತ್ತೆಯಾಗದ ಹಿನ್ನಲೆಯಲ್ಲಿ ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪೈಂಟಿಂಗ್ ಸಿಬ್ಬಂದಿ ಮೇಲೆ ಅನುಮಾನ: ದೂರುದಾರರು ತನ್ನ ಪರಿಚಯದ ಲ್ಯಾನ್ಸಿ ರವರಿಗೆ ತಮ್ಮ ಅತ್ತಾವರದ ಜೈನ್ ಕಂಪೌಂಡ್ನಲ್ಲಿರುವ ಇಂಧ್ರ ಧನುಶ್ ಅಪಾರ್ಟ್ ಮೇಂಟ್ನ ಪೈಂಟಿಂಗ್ ಕೆಲಸ ಮಾಡಲು ನೀಡಿರುತ್ತಾರೆ. ಸೆ.28 ಮತ್ತು ಸೆ.29ರಂದು ದೂರುದಾರರು ಮತ್ತು ಅವರ ಹೆಂಡತಿ ಮನೆಯಲ್ಲಿರುವ ಸಮಯ ಲ್ಯಾನ್ಸಿ ಮತ್ತು ಶಶಿಧರ್ ಎಂಬವರು ಪೈಂಟಿಂಗ್ ಕೆಲಸ ಮಾಡಿ ಹೋಗಿರುತ್ತಾರೆ. ಅ.2ರಿಂದ ರಿಂದ ಅ.4ರವರೆಗೆ ಲ್ಯಾನ್ಸಿ ಒಬ್ಬರೇ ಪ್ಲಾಟ್ ಗೆ ಬಂದು ಬಾಕಿ ಉಳಿದಿದ್ದ ಪೈಂಟಿಂಗ್ ಕೆಲಸ ಮುಗಿಸಿ ಹಣವನ್ನು ತೆಗೆದುಕೊಂಡು ಹೋಗಿರುತ್ತಾರೆ. ಈ ಪೈಂಟಿಂಗ್ ಕಾರ್ಮಿಕರೇ ಚಿನ್ನಾಭರಣ ಕಳವು ಮಾಡಿರಬಹುದೆಂದು ಸಾಧ್ಯತೆಯಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕಳವಾದ ಚಿನ್ನಾಭರಣಗಳಲ್ಲಿ 5ಲಕ್ಷ ರೂ. ಮೌಲ್ಯದ 40 ಗ್ರಾಂ ತೂಕವಿರುವ ಲಕ್ಷ್ಮೀ ಪೆಂಡಿಟ್ ಇರುವ ಲಾಕೆಟ್, 5ಲಕ್ಷ ರೂ. ಮೌಲ್ಯದ ಸುಮಾರು 40 ಗ್ರಾಂ ತೂಕವಿರುವ ಕರಿಮಣಿ ಸರ, 1.40ಲಕ್ಷ ರೂ. ಮೌಲ್ಯದ 14 ಗ್ರಾಂ ತೂಕವಿರುವ ಚೈನ್, 80ಸಾವಿರ ರೂ. ಮೌಲ್ಯದ 8 ಗ್ರಾಂ ತೂಕವಿರುವ ಒಂದು ಬ್ರಾಸ್ ಲೈಟ್,1ಲಕ್ಷ ರೂ. ಮೌಲ್ಯದ 10 ಗ್ರಾಂ ತೂಕವಿರುವ ರಿಂಗ್, 2.10ಲಕ್ಷ ರೂ. ಮೌಲ್ಯದ 2 ಚಿನ್ನದ ಬ್ಯಾಂಗಲ್ ಸೇರಿದಂತೆ ಒಟ್ಟು 136 ಗ್ರಾಂ ತೂಕದ 15.30ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವಾಗಿದೆ.