ಸಾಂದರ್ಭಿಕ ಚಿತ್ರ 
ದಕ್ಷಿಣ ಕನ್ನಡ

ಬಿಜೈ ಲಾಡ್ಜ್‌ನಲ್ಲಿ ಚಿನ್ನದ ಬ್ರಾಸ್‌ಲೆಟ್ ಕಳವು

ಮಂಗಳೂರು: ಬಿಜೈನ ಲಾಡ್ಜ್ ಒಂದರಲ್ಲಿ ಉಳಿದುಕೊಂಡಿದ್ದ ಆಂಧ್ರಪ್ರದೇಶ ಅನಂತರಪುರ ಮೂಲದ ಕುಟುಂಬವೊಂದಕ್ಕೆ ಸಂಬಂಧಿಸಿದ ಸುಮಾರು 10 ಗ್ರಾಂ. ತೂಕದ 1.40 ಲಕ್ಷ ರೂ. ಮೌಲ್ಯದ ಚಿನ್ನದ ಬ್ರಾಸ್ ಲೆಟ್ ಕಳವಾಗಿದೆ. ಎ.ಎನ್. ಶಿವ ಎಂಬವರು ನೀಡಿದ ದೂರಿನಂತೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರವಾಸಕ್ಕೆಂದು ಬಂದಿದ್ದ ಈ ಕುಟುಂಬ ಸದಸ್ಯರು ಎ.13ರಂದು ಬೆಳಗ್ಗೆ 6.30ರಿಂದ ಲಾಡ್ಜ್ ರೂಮ್ ನಲ್ಲಿ ವಾಸ್ತವ್ಯವಿದ್ದರು. ಎ.15ರಂದು ಬೆಳಗ್ಗೆ 8.30ಕ್ಕೆ ತಣ್ಣೀರು ಬಾವಿ ಬೀಚ್ ಗೆ ಹೋಗಿದ್ದಾರೆ. ಈ ವೇಳೆ ಬ್ಯಾಗ್ ನ ಒಳಗಡೆ ಒಂದು ಲ್ಯಾಪ್ ಟಾಪ್, ಪ್ಲಾಸ್ಟಿಕ್ ಬಾಕ್ಸ್ ನಲ್ಲಿ ಚಿನ್ನದ ಒಡವೆಗಳಾದ ಮಕ್ಕಳ ಎರಡು ಉಂಗುರ, ಪತ್ನಿಯ ಒಂದು ಉಂಗುರ ಮತ್ತು ದೂರುದಾರರ ಬ್ರಾಸ್ ಲೆಟ್ ಇಟ್ಟು ಲಾಕ್ ಮಾಡಿ ಕೀ ತೆಗೆದುಕೊಂಡು ಹೋಗಿದ್ದಾರೆ.
ಬೆಳಗ್ಗೆ 11.30ಕ್ಕೆ ವಾಪಾಸು ಬಂದು ನೋಡಿದಾಗ ಬ್ಯಾಗ್ ನಲ್ಲಿ ಇದ್ದ ಸೊತ್ತುಗಳ ಪೈಕಿ ಚಿನ್ನದ ಒಡವೆಗಳನ್ನು ಇರಿಸಿದ್ದ ಪ್ಲಾಸ್ಟಿಕ್ ಬಾಕ್ಸ್ ನಿಂದ ಬ್ರಾಸ್ ಲೆಟ್ ಕಣ್ಮರೆಯಾಗಿತ್ತು. ಉಳಿದ ವಸ್ತುಗಳು ಯಥಾ ಸ್ಥಿತಿಯಲ್ಲಿ ಇತ್ತು.
ಬ್ರಾಸ್ ಲೆಟ್ ಅನ್ನು ಲಾಡ್ಜ್ ನ ಮಾಲೀಕರು ಅಥವಾ ಕೆಲಸದವರು ನಕಲಿ ಕೀ ಮೂಲಕ ರೂಮಿನ ಬಾಗಿಲು ತೆಗೆದು ಕಳವು ಮಾಡಿರುವ ಅನುಮಾನವಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.