ಸದಾಶಿವ ದೇವಸ್ಥಾನದ ಅನ್ನದಾನಕ್ಕೆ ಅಡುಗೆ ಪಾತ್ರೆಗಳನ್ನು ಸಮರ್ಪಿಸಲಾಯಿತು. ಡಾ.ಹರಿಕೃಷ್ಣ ಪುನರೂರು, ಕಿಶೋರ್ ಶೆಟ್ಟಿ ಮುಂಬೈ, ಶ್ರೀನಾಥ್ ಭಟ್ ಇದ್ದರು. 
ದಕ್ಷಿಣ ಕನ್ನಡ

ಅನ್ನದಾನಕ್ಕಿದೆ ದೇವರ ಪ್ರೇರಣೆ

ಮೂಲ್ಕಿ: ದೇವಸ್ಥಾನಗಳ ಅನ್ನದಾನಕ್ಕೆ ಮಾಡುವ ಸಹಕಾರ ಮಹತ್ತರವಾದ ದಾನಗಳಲ್ಲಿ ಒಂದಾಗಿದೆ. ಇದರಲ್ಲಿ ದೇವರ ಪ್ರೇರಣೆ ಹಾಗೂ ಆಶೀರ್ವಾದ ತುಂಬಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ಹರಿಕೃಷ್ಣ ಪುನರೂರು ಹೇಳಿದರು.
ಮೂಲ್ಕಿ ಪಂಚಮಹಲ್ ಶ್ರೀ ಸದಾಶಿವ ದೇವಸ್ಥಾನದ ಅನ್ನದಾನದ ಉಪಯೋಗಕ್ಕಾಗಿ ಸುಮಾರು 1.5 ಲಕ್ಷ ರೂ ಮೌಲ್ಯದ ಅಡುಗೆ ಪಾತ್ರೆ, ಸಾಮಗ್ರಿಗಳನ್ನು ಉದ್ಯಮಿ ದಾನಿ ಕಿಶೋರ್ ಶೆಟ್ಟಿ ಮುಂಬೈ ಸಮರ್ಪಿಸಿದ ಸಂದರ್ಭ ಮಾತನಾಡಿದರು.
ಅರ್ಚಕ ಶ್ರೀನಾಥ್ ಭಟ್ ವಿಶೇಷ ಪ್ರಾರ್ಥನೆ ಸಲ್ಲಿಸಿ, ದಾನಿ ಕಿಶೋರ್ ಶೆಟ್ಟಿಯವರಿಗೆ ಪ್ರಸಾದ ನೀಡಿದರು. ರಮೇಶ್ ಮಯ್ಯ, ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಕೆ.ಭುವನಾಭಿರಾಮ ಉಡುಪ, ಕೆ. ಸತೀಶ್ ಭಂಡಾರಿ, ರಾಘವೇಂದ್ರ ಭಟ್ ಬಪ್ಪನಾಡು, ರಾಮದಾಸ್ ಕಾಮತ್, ತಾರನಾಥ್ ದೇವಾಡಿಗ, ಹರಿ ದೇವಾಡಿಗ, ಲಕ್ಷ್ಮೀಕಾಂತ್ ಭಟ್, ಸುಂದರ ಪುನರೂರು ಮತ್ತಿತರರು ಉಪಸ್ಥಿತರಿದ್ದರು.