ಗಡಿನಾಡ ಕನ್ನಡ ರಾಜ್ಯೋತ್ಸವರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬಿ.ಎಂ.ಹನೀಫ್ ಉದ್ಘಾಟಿಸಿದರು.
ದಕ್ಷಿಣ ಕನ್ನಡ
ಹೃದಯದಿಂದ ಮೂಡಿಬರಲಿ ಭಾಷಾ ಸೌಂದರ್ಯ ವಿಶಾಲತೆ : ಬಿ.ಎಂ.ಹನೀಫ್ ಪ್ರತಿಪಾದನೆ
ಸಾಧಕರಿಗೆ ಗೌರವಾರ್ಪಣೆ
ತುಳು, ಬ್ಯಾರಿ, ಹವ್ಯಕ, ಶಿವಳ್ಳಿ, ಕೊಂಕಣಿ ಮೊದಲಾದ ಹತ್ತು ಹಲವು ಉಪಭಾಷೆಗಳು ಬೆಳೆಸಿದ ಮಹಾವೃಕ್ಷ ಕನ್ನಡ ಎಂಬುದನ್ನು ತಲಸ್ಪರ್ಶಿಯಾಗಿ ಗಮನಿಸಬೇಕು. ಈ ಉಪಭಾಷೆಗಳಿಗಾಗುವ ನೋವುಗಳು ಕನ್ನಡದ ಮೇಲೆ ದೊಡ್ಡ ಪ್ರತ್ಯಾಘಾತವನ್ನೇ ಸೃಷ್ಟಿಸಬಹುದು. ಎಲ್ಲವನ್ನೂ ಒಳಗೊಂಡ ಏಕ ಸ್ವರೂಪದ ಸಮಷ್ಟಿ ಭಾವವೇ ನಮ್ಮ ಹಿರಿಮೆ.