ವಿಜಯವಾಣಿ ಸುದ್ದಿಜಾಲ ಕುಂದಾಪುರ
ಕಳೆದ ಹತ್ತು ವರ್ಷಗಳಲ್ಲಿ ರಾಜ್ಯದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಟಾಪ್ ಹತ್ತು ಪೊಲೀಸ್ ಠಾಣೆಗಳಲ್ಲಿ ಉಡುಪಿ ಜಿಲ್ಲೆಯ ಗಂಗೊಳ್ಳಿ ಪೊಲೀಸ್ ಠಾಣೆ ಸ್ಥಾನ ಪಡೆಯುವ ಮೂಲಕ ಜಿಲ್ಲೆಗೆ ಮಾದರಿಯಾಗಿದ್ದಲ್ಲದೆ ಜಿಲ್ಲಾ ಪೊಲೀಸ್ ಇಲಾಖೆಗೆ ಕೀರ್ತಿ ತಂದಿದೆ.
2016 ಜನವರಿ 1ರಿಂದ 10 ವರ್ಷಗಳ ಅವಧಿಗೆ ಪೊಲೀಸ್ ಇಲಾಖೆಯ ಪ್ರಮುಖ ಕಾರ್ಯಕ್ಷಮತೆ ಸೂಚಕಗಳ ಮಾನದಂಡಗಳನ್ನಿಟ್ಟುಕೊಂಡು ಇಲಾಖೆಯ ಕಾರ್ಯಕ್ಕೊಳಪಟ್ಟ 14 ಅಂಶಗಳಲ್ಲಿ 100 ಅಂಕಗಳಿಗೆ ಇಲಾಖೆಯಿಂದ ಪರಿಶೀಲನೆ ನಡೆದಿತ್ತು. ಇದರಲ್ಲಿ ಹತ್ತು ಅತ್ಯುತ್ತಮ ಪ್ರದರ್ಶನ ನೀಡಿದ ಠಾಣೆಗಳ ಪೈಕಿ ಜಿಲ್ಲೆಯಿಂದ ಗಂಗೊಳ್ಳಿ ಪೊಲೀಸ್ ಠಾಣೆಯನ್ನು ೋಷಿಸಲಾಗಿದೆ.
ಉಡುಪಿ ಜಿಲ್ಲೆಯ ಕುಂದಾಪುರ ಪೊಲೀಸ್ ಉಪವಿಭಾಗದ ಬೈಂದೂರು ವೃತ್ತದ ಗಂಗೊಳ್ಳಿ ಪೊಲೀಸ್ ಠಾಣೆ ರಾಜ್ಯದ ಟಾಪ್ 10 ಠಾಣೆಗಳಲ್ಲಿ 67.22 ಸ್ಕೋರ್ ಪಡೆದು 7ನೇ ಸ್ಥಾನದಲ್ಲಿದ್ದು, ಉಡುಪಿ ಜಿಲ್ಲೆಯಲ್ಲಿ ಸ್ಥಾನ ಪಡೆದ ಏಕೈಕ ಠಾಣೆಯಾಗಿದೆ. ಕ್ರಮವಾಗಿ ರಾಯಚೂರು ಜಿಲ್ಲೆಯ ಯಾಪಲದಿನ್ನಿ ಪೊಲೀಸ್ ಠಾಣಾ ಪ್ರಥಮ ಸ್ಥಾನ ಪಡೆದಿದ್ದು, ಉಳಿದಂತೆ ಮೈಸೂರು ನಂಜನಗೂಡು ಗ್ರಾವಾಂತರ ಠಾಣೆ, ಗದಗ ಜಿಲ್ಲೆಯ ನರೆಗಾಲ್ ಠಾಣಾ, ರಾಯಚೂರು ಶಕ್ತಿನಗರ, ಬೀದರ್ ಜಿಲ್ಲೆಯ ಹುಲ್ಸೂರು, ಗದಗ್‌ನ ಮುಲಗುಂಡ್, ಉಡುಪಿಯ ಗಂಗೊಳ್ಳಿ, ಗದಗ ಜಿಲ್ಲೆ ನರಗುಂದ್, ರಾಯಚೂರಿನ ಇಡಪನೂರು ಠಾಣೆ, ಗದಗ ಜಿಲ್ಲೆಯ ಗದಗ ನಗರ ಠಾಣೆ ಹತ್ತು ಸ್ಥಾನಗಳನ್ನು ಪಡೆದಿವೆ.
ಇಲಾಖೆಗೆ ಸಂಬಂಧಿತ ಒಟ್ಟು 14 ಸೂತ್ರಗಳನ್ನು ಮಾನದಂಡವಾಗಿಟ್ಟುಕೊಂಡು ಒಂದೊಂದು ವಿಭಾಗಕ್ಕೂ 5, 10 ಅಂಕಗಳಲ್ಲಿ ಒಟ್ಟು 100 ಅಂಕಗಳಿಗೆ ಕೇಂದ್ರೀಕರಿಸಿ ಕೆಪಿಐ(ಕೀ ಪರ್ಫಾಮೆನ್ಸ್ ಇಂಡಿಕೇಟರ್) ಸಿದ್ಧಪಡಿಸಲಾಗಿತ್ತು. ಅಪಘಾತಗಳ ಸಂಖ್ಯೆ ಇಳಿಮುಖ, ಚಾರ್ಜ್‌ಶೀಟ್ ಸಲ್ಲಿಕೆ, ಇ-ಬೀಟ್, ಇ-ಸಾಕ್ಷ್ಯ, ಇ-ಸಮನ್ಸ್, ದುಷ್ಕರ್ಮಿ, ರೌಡಿಶೀಟರ್‌ಗಳು ದಾಖಲೆಗಳ ನಿರ್ವಹಣೆಯೊಂದಿಗೆ ಅಗತ್ಯ ಕ್ರಮ ಜರುಗಿಸುವುದು, ದೂರು ಅರ್ಜಿಗಳ ತ್ವರಿತ ವಿಲೇವಾರಿ, ಸಾರ್ವಜನಿಕರೊಂದಿಗೆ ಉತ್ತಮ ಸ್ಪಂದನೆ ಸಹಿತ ಇಲಾಖೆ ಸಂಬಂಧಿತ ಕಾರ್ಯಚಟುವಟಿಕೆಗಳ ಬಗ್ಗೆ 14 ಅಂಶಗಳನ್ನು ಪರಿಗಣಿಸಲಾಗಿತ್ತು.
ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಕಳೆದ 10 ವರ್ಷಗಳ ಅವಧಿಯಿಂದ ಕರ್ತವ್ಯ ನಿರ್ವಹಿಸಿದ ಪಿಎಸೈಗಳು, ಸಿಬ್ಬಂದಿಯ ಕಾರ್ಯಕ್ಷಮತೆ ಹಾಗೂ ಪೊಲೀಸ್ ಉಪವಿಭಾಗದ ಅಧಿಕಾರಿಗಳು, ಬೈಂದೂರು ಸಿಪಿಐಗಳು ಅವರಿಗೆ ನೀಡಿದ ವಾರ್ಗದರ್ಶನ ಅಭಿನಂದನಾರ್ಹ. ಕೋಮುಗಲಭೆ ಮೊದಲಾದ ಸಮಸ್ಯೆಗಳು ಇಳಿಮುಖವಾಗಿವೆ. ಠಾಣಾ ವ್ಯಾಪ್ತಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಹಿತ ವಿವಿಧ ಅಂಶಗಳನ್ನು ಪರಿಗಣಿಸಿ ಪೊಲೀಸ್ ಇಲಾಖೆಯು ರಾಜ್ಯದ ಟಾಪ್ 10ರಲ್ಲಿ 7ನೇ ಸ್ಥಾನವನ್ನು ಗಂಗೊಳ್ಳಿ ಠಾಣೆಗೆ ನೀಡಿದ್ದು, ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ ಹೆಮ್ಮೆ ತಂದಿದೆ.ಹರಿರಾಂ ಶಂಕರ್ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠ್ಠಾಧಿಕಾರಿ