ಕುಕ್ಕೆ ದೇವಾಲಯ  
ದಕ್ಷಿಣ ಕನ್ನಡ

ಕುಕ್ಕೆ ಜಾತ್ರೆಗೆ ಭರದ ಸಿದ್ಧತೆ, ಡಿ.5ರಿಂದ ಉತ್ಸವ

ಶ್ವೇತವರ್ಣದಿಂದ ಕಂಗೊಳಿಸುತ್ತಿರುವ ರಾಜಗೋಪುರ

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ

ಪ್ರಸಿದ್ಧ ಪುಣ್ಯಕ್ಷೇತ್ರ ಸುಬ್ರಹ್ಮಣ್ಯದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ವಾರ್ಷಿಕ ಚಂಪಾಷಷ್ಠಿ ಜಾತ್ರಾಮಹೋತ್ಸವವು ಡಿ.5ರಿಂದ 21ರ ತನಕ ನಡೆಯಲಿದ್ದು, ಕ್ಷೇತ್ರದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ.

ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನ ಹಾಗೂ ಕ್ಷೇತ್ರದ ಕಟ್ಟಡಗಳಿಗೆ ಸುಣ್ಣಬಣ್ಣ ಬಳಿಯಲಾಗುತ್ತಿದೆ. ರಾಜಗೋಪುರಕ್ಕೆ ವರ್ಣಾಲಂಕಾರ ವಾಡುವ ಕಾರ್ಯವೂ ಸಾಗುತ್ತಿದ್ದು, ಶ್ವೇತವರ್ಣದಿಂದ ಗೋಪುರ ಕಂಗೊಳಿಸುತ್ತಿದೆ. ಡಿ.15ರಂದು ಬೆಳಗ್ಗೆ ಚಂಪಾಷಷ್ಠಿ ಮಹಾರಥೋತ್ಸವ ಜರುಗಲಿದೆ.

ದೇವಳದ ಹೊರಾಂಗಣ, ಶೃಂಗೇರಿ ಮಠ, ಹೊಸೊಳಿಗಮ್ಮನ ಗುಡಿ, ಮುಖ್ಯಪ್ರಾಣ ಗುಡಿ, ಗಣಪತಿ ದೇವಸ್ಥಾನ, ಬಿಲದ್ವಾರ, ಬಿಲದ್ವಾರ ಕಟ್ಟೆ ಹಾಗೂ ಕುವಾರಧಾರಾ ಗೋಪುರಗಳಿಗೆ ಬಣ್ಣ ಬಳಿಯುವ ಕಾರ್ಯ ನಡೆಯುತ್ತಿದೆ. ಆದಿಸುಬ್ರಹ್ಮಣ್ಯ ದೇವಳ, ಷಣ್ಮುಖ ಪ್ರಸಾದ ಭೋಜನ ಶಾಲೆ, ದೇವಳದ ವಸತಿಗೃಹಗಳು, ಕಾಶಿಕಟ್ಟೆ, ಗಣಪತಿ ಹಾಗೂ ಆಂಜನೇಯ ಗುಡಿ ಮತ್ತು ಸವಾರಿ ಮಂಟಪಗಳೂ ಸುಣ್ಣಬಣ್ಣಗಳಿಂದ ಶಂಗಾರಗೊಳ್ಳುತ್ತಿವೆ. ಕುಕ್ಕೆ ಕ್ಷೇತ್ರವು ನೂತನ ವರ್ಣಾಲಂಕಾರದಿಂದ ಕಂಗೊಳಿಸುತ್ತಾ ಜಾತ್ರೋತ್ಸವಕ್ಕೆ ಸಜ್ಜಾಗುತ್ತಿದೆ.

ಭಕ್ತರಿಗೆ ಹಲವು ಸೌಲಭ್ಯ

ಜಾತ್ರೋತ್ಸವದ ಪೂರ್ವಸಿದ್ಧತೆ ಕುರಿತು ದೇವಳದ ವತಿಯಿಂದ ಸಭೆ ನಡೆಸಿ, ಭಕ್ತರ ಅನುಕೂಲಕ್ಕಾಗಿ ಒದಗಿಸಬೇಕಾದ ಸೌಕರ್ಯಗಳ ಬಗ್ಗೆ ಚರ್ಚಿಸಿ ಜವಾಬ್ದಾರಿಗಳನ್ನು ಹಂಚಲಾಗಿದೆ. ಕ್ಷೇತ್ರದ ವಿವಿಧ ಭಾಗಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ವಾಡಲಾಗುತ್ತಿದೆ. ನೈರ್ಮಲ್ಯ ಕಾಪಾಡುವ ದೃಷ್ಟಿಯಿಂದ ಅಗತ್ಯ ವ್ಯವಸ್ಥೆಗಳನ್ನು ಕೈಗೊಳ್ಳಲಾಗುತ್ತಿದೆ. ಭಕ್ತರ ಅನುಕೂಲಕ್ಕಾಗಿ ಕುವಾರಧಾರಾ, ಆದಿಸುಬ್ರಹ್ಮಣ್ಯ, ಸವಾರಿ ಮಂಟಪ ಹಾಗೂ ಪಾರ್ಕಿಂಗ್ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಾತ್ಕಾಲಿಕ ಶೌಚಗೃಹಗಳನ್ನು ನಿರ್ಮಿಸಲಾಗುವುದು.