ಮದ್ಯವರ್ಜನ ಶಿಬಿರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿದರು.  
ದಕ್ಷಿಣ ಕನ್ನಡ

ಆತ್ಮವಿಶ್ವಾಸ, ದೃಢಸಂಕಲ್ಪ ಇದ್ದಾಗ ದುಶ್ಚಟದಿಂದ ಮುಕ್ತಿ

ವಿಶೇಷ ಮದ್ಯವರ್ಜನ ಶಿಬಿರ

ಬೆಳ್ತಂಗಡಿ: ಚಟಗಳಿಂದ ಉಂಟಾಗುವ ಸಮಸ್ಯೆಗಳಿಗೆ ಪರಿಹಾರ ತಿಳಿದುಕೊಂಡಾಗ ಮಹತ್ತರ ಬದಲಾವಣೆ ಕಂಡುಕೊಳ್ಳಬಹುದು. ದುಶ್ಚಟವುಳ್ಳ ವ್ಯಕ್ತಿ ಕೌಟುಂಬಿಕವಾಗಿ, ಆರ್ಥಿಕವಾಗಿ ಬಹಳಷ್ಟು ಕ್ಷೀಣಿಸುವುದರ ಜತೆಗೆ ತನ್ನ ಬದುಕನ್ನು ಸಂಪೂರ್ಣ ನಾಶಮಾಡುವ ಸ್ಥಿತಿಗೆ ತಲುಪುತ್ತಾನೆ. ಚಟದಿಂದ ಮುಕ್ತಿ ಹೊಂದಲು ದೃಢಸಂಕಲ್ಪ, ಆತ್ಮವಿಶ್ವಾಸ ಮುಖ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ 281ನೇ ವಿಶೇಷ ಮದ್ಯವರ್ಜನ ಶಿಬಿರದಲ್ಲಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ.ಪಾಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ವತಿಯಿಂದ ರಾಜ್ಯಾದ್ಯಂತ ವಾರ್ಷಿಕವಾಗಿ 150 ಶಿಬಿರ ನಡೆಸಲಾಗುತ್ತಿದೆ. ಏಕಕಾಲದಲ್ಲಿ 15 ಶಿಬಿರಗಳನ್ನು ನಡೆಸುವ ಚಿಕಿತ್ಸಾ ತಂಡ ವೇದಿಕೆಯ ಮೂಲಕ ಕಾರ್ಯನಿರ್ವಹಿಸುತ್ತಿದೆ ಎಂದರು.

ಆಡಳಿತ ಯೋಜನಾಧಿಕಾರಿ ಮಾಧವ ಗೌಡ ವಂದಿಸಿದರು. ಶಿಬಿರದಲ್ಲಿ ಜಯಾನಂದ, ಮಧು ಜಿ.ಆರ್, ಜಯಲಕ್ಷ್ಮೀ, ಕಿಶೋರ್, ಕುಮಾರ್, ವೈದ್ಯ ಡಾ.ಶಿಶಿರ್ ಕುಮಾರ್, ಸಲಹೆಗಾರರಾದ ಸುಮನಾ ಪಿಂಟೋ, ಮಂಜುನಾಥ್, ವೈದ್ಯಾಧಿಕಾರಿಗಳಾದ ಡಾ.ಮೋಹನದಾಸ ಗೌಡ, ಉಜಿರೆ ಎಸ್‌ಡಿಎಂ ಆಸ್ಪತ್ರೆಯ ಡಾ.ಎಂ.ಎನ್.ಭಟ್, ಯೋಜನೆಯ ಟ್ರಸ್ಟಿ ಹರೀಶ್ ಕೃಷ್ಣ ಸ್ವಾಮಿ, ಕೇಂದ್ರ ಕಚೇರಿಯ ಮಾಧ್ಯಮ ವಿಭಾಗದ ನಿರ್ದೇಶಕ ಪ್ರದೀಪ್, ಯೋಜನಾಧಿಕಾರಿ ಅಜಿತ್ ಉಪಸ್ಥಿತರಿದ್ದರು.