ಟೈಲರಿಂಗ್ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಕೃಷಿಕ ನಾರಾಯಣ ರೈ ಕುದ್ಕಾಡಿ ಉದ್ಘಾಟಿಸಿದರು.  
ದಕ್ಷಿಣ ಕನ್ನಡ

ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳೆಯರಿಗೆ ಸೌಲಭ್ಯ : ನಾರಾಯಣ ರೈ

ಸೌಮ್ಯ ಆರ್
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಪುತ್ತೂರು ತಾಲೂಕು ವತಿಯಿಂದ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಅರಿಯಡ್ಕ ವಲಯದ ಬಡಗನ್ನೂರು ಕಾರ್ಯಕ್ಷೇತ್ರದ ಜ್ಞಾನದೀಪ ಜ್ಞಾನವಿಕಾಸ ಕೇಂದ್ರದ ಸದಸ್ಯರಿಗೆ ಹಮ್ಮಿಕೊಂಡಿದ್ದ ಮೂರು ತಿಂಗಳ ಉಚಿತ ಟೈಲರಿಂಗ್ ತರಬೇತಿ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಶಶಿಧರ್ ಎಂ., ಬಡಗನ್ನೂರು ಪಂಚಾಯಿತಿ ಅಧ್ಯಕ್ಷೆ ಪುಷ್ಪಲತಾ, ಟೈಲರಿಂಗ್ ತರಬೇತಿ ಪಡೆದ ರೆಹರಾ, ರಶ್ಮಿತಾ, ರೋಹಿಣಿ ಹಾಗೂ ವನ್ಯಶ್ರೀ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಲಯದ ಮೇಲ್ವಿಚಾರಕ ಹರೀಶ್ ಕೆ., ಟೈಲರಿಂಗ್ ತರಬೇತಿ ನೀಡಿದ ಶಿಕ್ಷಕಿ ಸವಿತಾ ಮತ್ತಿತರರಿದ್ದರು.