ನಿರಂತರ ಆರೋಗ್ಯ ತಪಾಸಣೆ ಅಗತ್ಯ :ಡಿ.ರಮೇಶ ನಾಯಕ್ ಉಚಿತ ಆರೋಗ್ಯ ಹಾಗೂ ಕಣ್ಣು ತಪಾಸಣಾ ಶಿಬಿರ Free Health and Eye Checkup Camp Health Camp Maninalkur Village Kayarpalke Hegde's School ಆರೋಗ್ಯ ಶಿಬಿರ ಮಣಿನಾಲ್ಕೂರು ಗ್ರಾಮ ಕಾಯರ್‌ಪಲ್ಕೆ ಹೆಗ್ಡೇಸ್ ಶಾಲೆ ಬಂಟ್ವಾಳ: ಗ್ರಾಮೀಣ ಪ್ರದೇಶಗಳಲ್ಲಿ ಉಚಿತ ಆರೋಗ್ಯ ಶಿಬಿರಗಳು ಅತ್ಯಂತ ಪರಿಣಾಮಕಾರಿ. ಇತ್ತೀಚಿನ ದಿನಗಳಲ್ಲಿ ಹೃದಯಾಘಾತ, ಹೃದಯಸ್ತಂಭನದಂತಹ ಗಂಭೀರ ಕಾಯಿಲೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಿರಂತರ ಆರೋಗ್ಯ ತಪಾಸಣೆ ಮತ್ತು ತಜ್ಞ ವೈದ್ಯರ ಸಲಹೆ ಅವಶ್ಯಕ ಎಂದು ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ ಸಂಚಾಲಕ ಡಿ.ರಮೇಶ ನಾಯಕ್ ಹೇಳಿದರು. ಮಣಿನಾಲ್ಕೂರು ಗ್ರಾಮದ ಕಾಯರ್‌ಪಲ್ಕೆ ಹೆಗ್ಡೇಸ್ ಖಾಸಗಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ವಠಾರದಲ್ಲಿ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ, ದಕ್ಷಿಣ ಕನ್ನಡ ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘ, ಹೆಗ್ಡೇಸ್ ಖಾಸಗಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ, ಕೆಎಂಸಿ ಆಸ್ಪತ್ರೆ ಅತ್ತಾವರ ಆಶ್ರಯದಲ್ಲಿ ಭಾನುವಾರ ಉಚಿತ ಆರೋಗ್ಯ ಹಾಗೂ ಕಣ್ಣು ತಪಾಸಣಾ ಶಿಬಿರದಲ್ಲಿ ಮಾತನಾಡಿದರು. ಡಾ.ವಿಜಯಲಕ್ಷ್ಮೀ ನಾಯಕ್ ಮಾತನಾಡಿ, ಊರು ಆರೋಗ್ಯಪೂರ್ಣವಾಗಿರಬೇಕಾದರೆ ಸಾಮಾಜಿಕ ಕಾಳಜಿ ಅತ್ಯಂತ ಮುಖ್ಯ. ಶಾಲಾ ಆವರಣದಲ್ಲಿ ಇಂತಹ ಜವಾಬ್ದಾರಿಯುತ ಆರೋಗ್ಯ ಶಿಬಿರ ಆಯೋಜಿಸಿರುವುದು ಗ್ರಾಮಸ್ಥರಿಗೆ ಉಪಯುಕ್ತವಾಗಿದೆ ಎಂದರು. ಶಾಲೆ ಆಡಳಿತ ಮಂಡಳಿ ಪ್ರಮುಖರಾದ ಪ್ರಕಾಶ್ ಹೆಗ್ಗಡೆ, ಕೂಡಿಬೈಲು ಮಹಮ್ಮಾಯಿ ದೇವಸ್ಥಾನ ಆಡಳಿತ ಮೊಕ್ತೇಸರ ಶ್ರೀನಿವಾಸ್ ಶೆಣೈ, ಮಣಿನಾಲ್ಕೂರು ಗ್ರಾಪಂ ಅಧ್ಯಕ್ಷೆ ವಿಮಲಾ, ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ ಅಧ್ಯಕ್ಷ ಮುರಳೀಧರ ಪ್ರಭು ವಗ್ಗ, ಕಾರ್ಯದರ್ಶಿಗಳಾದ ರವೀಂದ್ರ ನಾಯಕ್ ಕುಂಟಲ್ಪಾಡಿ, ದ.ಕ. ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘದ ಅಧ್ಯಕ್ಷ ದಯಾನಂದ ನಾಯಕ್, ಕಾರ್ಯದರ್ಶಿಗಳಾದ ಸುಧಾಕರ್ ಪ್ರಭು ಪೆರ್ಮರೋಡಿ, ವಸಂತ ನಾಯಕ್ ಕೂಡಿಬೈಲು, ಸುಭಾಷ್ ನಾಯಕ್ ಸರಪಾಡಿ, ಪಾಣೆಮಂಗಳೂರು ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಜ್ಞಾನೇಶ್ ಪ್ರಭು, ಗಣೇಶ್ ಪ್ರಭು ಪಂಜಿಕಲ್ಲು, ಗಣೇಶ್ ಪ್ರಭು ಓಮ, ಹಂಡೀರು ಶ್ರೀಧರ್ ಪ್ರಭು ಉಪಸ್ಥಿತರಿದ್ದರು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಭಾಸ್ಕರ್ ಕಾರ್ಯಕ್ರಮ ನಿರೂಪಿಸಿದರು. ಸುಧೀರ್ ನಾಯಕ್ ಬೆಂಗಳೂರು ಮತ್ತು ಕೆ.ಎಂ.ಸಿ.ಯ ಡಾ.ವೈಭವ್ ಶಿಬಿರದ ಮಹತ್ವ ವಿವರಿಸಿದರು. ಸುಚಿತ್ರ ನಾಯಕ್ ಮಣಿನಾಲ್ಕೂರು ವಂದಿಸಿದರು. ಸ್ಥಳೀಯರಾದ ಭಾಸ್ಕರ್ ಪ್ರಭು ಮತ್ತು ವಾಸುದೇವ ಪ್ರಭು ಕೊರ್ದೊಟ್ಟು ನೇತೃತ್ವದಲ್ಲಿ ಮುರಳೀಧರ ಪ್ರಭು ವಗ್ಗ ಹಾಗೂ ಕೆಎಂಸಿಯ ಕಾರ್ತಿಕ್ ನಾಯಕ್ ಮಾರ್ಗದರ್ಶನದಲ್ಲಿ ಆರೋಗ್ಯ ಶಿಬಿರ ನಡೆಯಿತು. ಬಿಟಿಡಬ್ಲ್ಯು_ಡಿ29_8 ಕಾಯರ್ ಪಲ್ಕೆ ಹೆಗ್ಡೇಸ್ ಖಾಸಗಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ವಠಾರದಲ್ಲಿ ಆರೋಗ್ಯ ಹಾಗೂ ಕಣ್ಣು ತಪಾಸಣಾ ಶಿಬಿರ ಭಾನುವಾರ ನಡೆಯಿತು.
ಬಂಟ್ವಾಳ: ಗ್ರಾಮೀಣ ಪ್ರದೇಶಗಳಲ್ಲಿ ಉಚಿತ ಆರೋಗ್ಯ ಶಿಬಿರಗಳು ಅತ್ಯಂತ ಪರಿಣಾಮಕಾರಿ. ಇತ್ತೀಚಿನ ದಿನಗಳಲ್ಲಿ ಹೃದಯಾಘಾತ, ಹೃದಯಸ್ತಂಭನದಂತಹ ಗಂಭೀರ ಕಾಯಿಲೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಿರಂತರ ಆರೋಗ್ಯ ತಪಾಸಣೆ ಮತ್ತು ತಜ್ಞ ವೈದ್ಯರ ಸಲಹೆ ಅವಶ್ಯಕ ಎಂದು ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ ಸಂಚಾಲಕ ಡಿ.ರಮೇಶ ನಾಯಕ್ ಹೇಳಿದರು.
ಮಣಿನಾಲ್ಕೂರು ಗ್ರಾಮದ ಕಾಯರ್‌ಪಲ್ಕೆ ಹೆಗ್ಡೇಸ್ ಖಾಸಗಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ವಠಾರದಲ್ಲಿ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ, ದಕ್ಷಿಣ ಕನ್ನಡ ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘ, ಹೆಗ್ಡೇಸ್ ಖಾಸಗಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ, ಕೆಎಂಸಿ ಆಸ್ಪತ್ರೆ ಅತ್ತಾವರ ಆಶ್ರಯದಲ್ಲಿ ಭಾನುವಾರ ಉಚಿತ ಆರೋಗ್ಯ ಹಾಗೂ ಕಣ್ಣು ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಡಾ.ವಿಜಯಲಕ್ಷ್ಮೀ ನಾಯಕ್ ಮಾತನಾಡಿ, ಊರು ಆರೋಗ್ಯಪೂರ್ಣವಾಗಿರಬೇಕಾದರೆ ಸಾಮಾಜಿಕ ಕಾಳಜಿ ಅತ್ಯಂತ ಮುಖ್ಯ. ಶಾಲಾ ಆವರಣದಲ್ಲಿ ಇಂತಹ ಜವಾಬ್ದಾರಿಯುತ ಆರೋಗ್ಯ ಶಿಬಿರ ಆಯೋಜಿಸಿರುವುದು ಗ್ರಾಮಸ್ಥರಿಗೆ ಉಪಯುಕ್ತವಾಗಿದೆ ಎಂದರು.
ಶಾಲೆ ಆಡಳಿತ ಮಂಡಳಿ ಪ್ರಮುಖರಾದ ಪ್ರಕಾಶ್ ಹೆಗ್ಗಡೆ, ಕೂಡಿಬೈಲು ಮಹಮ್ಮಾಯಿ ದೇವಸ್ಥಾನ ಆಡಳಿತ ಮೊಕ್ತೇಸರ ಶ್ರೀನಿವಾಸ್ ಶೆಣೈ, ಮಣಿನಾಲ್ಕೂರು ಗ್ರಾಪಂ ಅಧ್ಯಕ್ಷೆ ವಿಮಲಾ, ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ ಅಧ್ಯಕ್ಷ ಮುರಳೀಧರ ಪ್ರಭು ವಗ್ಗ, ಕಾರ್ಯದರ್ಶಿಗಳಾದ ರವೀಂದ್ರ ನಾಯಕ್ ಕುಂಟಲ್ಪಾಡಿ, ದ.ಕ. ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘದ ಅಧ್ಯಕ್ಷ ದಯಾನಂದ ನಾಯಕ್, ಕಾರ್ಯದರ್ಶಿಗಳಾದ ಸುಧಾಕರ್ ಪ್ರಭು ಪೆರ್ಮರೋಡಿ, ವಸಂತ ನಾಯಕ್ ಕೂಡಿಬೈಲು, ಸುಭಾಷ್ ನಾಯಕ್ ಸರಪಾಡಿ, ಪಾಣೆಮಂಗಳೂರು ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಜ್ಞಾನೇಶ್ ಪ್ರಭು, ಗಣೇಶ್ ಪ್ರಭು ಪಂಜಿಕಲ್ಲು, ಗಣೇಶ್ ಪ್ರಭು ಓಮ, ಹಂಡೀರು ಶ್ರೀಧರ್ ಪ್ರಭು ಉಪಸ್ಥಿತರಿದ್ದರು.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಭಾಸ್ಕರ್ ಕಾರ್ಯಕ್ರಮ ನಿರೂಪಿಸಿದರು. ಸುಧೀರ್ ನಾಯಕ್ ಬೆಂಗಳೂರು ಮತ್ತು ಕೆ.ಎಂ.ಸಿ.ಯ ಡಾ.ವೈಭವ್ ಶಿಬಿರದ ಮಹತ್ವ ವಿವರಿಸಿದರು. ಸುಚಿತ್ರ ನಾಯಕ್ ಮಣಿನಾಲ್ಕೂರು ವಂದಿಸಿದರು. ಸ್ಥಳೀಯರಾದ ಭಾಸ್ಕರ್ ಪ್ರಭು ಮತ್ತು ವಾಸುದೇವ ಪ್ರಭು ಕೊರ್ದೊಟ್ಟು ನೇತೃತ್ವದಲ್ಲಿ ಮುರಳೀಧರ ಪ್ರಭು ವಗ್ಗ ಹಾಗೂ ಕೆಎಂಸಿಯ ಕಾರ್ತಿಕ್ ನಾಯಕ್ ಮಾರ್ಗದರ್ಶನದಲ್ಲಿ ಆರೋಗ್ಯ ಶಿಬಿರ ನಡೆಯಿತು.