ಪ್ರಕರಣದ ಹಿನ್ನೆಲೆ
2015-16ನೇ ಸಾಲಿನಲ್ಲಿ ಶಕೀಲಾ ಅಶೋಕ್ ಮತ್ತು ಹರಿಯಪ್ಪ ಸೇರಿ ಸ್ವಸಹಾಯ ಗುಂಪುಗಳ ಹೆಸರಿನಲ್ಲಿ ಸಾಲದ ರೂಪದಲ್ಲಿ ಸಂಘದ ಹಣ ಪಡೆದು ದುರುಪಯೋಗಪಡಿಸಿಕೊಂಡಿದ್ದರು. ಈ ಅಕ್ರಮ 2015-16ನೇ ಸಾಲಿನ ಲೆಕ್ಕಪರಿಶೋಧನಾ ವರದಿಯಲ್ಲಿ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರಿಬ್ಬರ ವಿರುದ್ಧ ಸಹಕಾರ ಸಂಘಗಳ ನ್ಯಾಯಾಲಯಕ್ಕೆ ದೂರು ದಾಖಲಿಸಲಾಗಿತ್ತು.