Arrest 
ದಕ್ಷಿಣ ಕನ್ನಡ

ಬಂಧಿತ ಆರೋಪಿ ವಿರುದ್ಧ ಮತ್ತೆ ಐದು ಕೇಸು

ನ್ಯಾಯಾಂಗ ಬಂಧನ

ಕಾಸರಗೋಡು: ರೈಲುಗಳಲ್ಲಿ ನಿರಂತರ ಕಳವು ನಡೆಸುತ್ತಿರುವ ಮುಟ್ಟತ್ತೋಡಿ ಪನ್ನಿಪ್ಪಾರೆಯ ಕೆ.ಅಬ್ದುಲ್ಲ ಎಂಬಾತನ ವಿರುದ್ಧ ಮತ್ತೆ 5 ಕೇಸುಗಳನ್ನು ರೈಲ್ವೆ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಅ.7ರಂದು ನೇತ್ರಾವತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಎರಡು ಮೊಬೈಲ್ ಫೋನ್‌ಗಳನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾದ ಅಬ್ದುಲ್ಲ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾನೆ.

ಪೊಲೀಸರು ಈತನನ್ನು ಕಸ್ಟಡಿಗೆ ತೆಗೆದು ವಿಚಾರಣೆಗೊಳಪಡಿಸಿದಾಗ ಈತ ಹಲವು ಮೊಬೈಲ್ ಫೋನ್‌ಗಳು ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನು ಕಳವು ನಡೆಸಿರುವ ಬಗ್ಗೆ ಮಾಹಿತಿ ಲಭಿಸಿದೆ. ಈತ ವಾಸಿಸುವ ಕಾಞಂಗಾಡು ರೈಲು ನಿಲ್ದಾಣ ಸಮೀಪದ ಬಾಡಿಗೆ ಮನೆಯಲ್ಲಿ ಹಲವು ಫೋನ್‌ಗಳು ಹಾಗೂ ಪಾಸ್‌ಪೋರ್ಟ್‌ಗಳನ್ನು ವಶಪಡಿಸಿಕೊಳ್ಳಲಗಾಗಿದೆ. ಅಲ್ಲದೆ ರೈಲುಗಳಲ್ಲಿ ಕಳವು ನಡೆಸಿದ ಹಲವು ಬ್ಯಾಗ್‌ಗಳು, ಆಧಾರ್ ಕಾರ್ಡ್‌ಗಳು ಪತ್ತೆಯಾಗಿವೆ.