ಕಾಸರಗೋಡು: ಬೇಕಲ ಕೋಟಿಕುಳಂನಲ್ಲಿ ರೈಲು ಡಿಕ್ಕಿಯಾಗಿ ಕೋಟಿಕುಳಂನ ಎ.ಎಂ.ಎಸ್.ಎಂ. ಕಾಟೇಜ್ ನಿವಾಸಿ, ಮೀನುಗಾರಿಕೆ ಕಾರ್ಮಿಕ, ಡಿ.ಮುಕುಂದನ್ ಅವರ ಪುತ್ರ ಸುಮೇಶ್(54) ದಾರುಣವಾಗಿ ಮೃತಪಟ್ಟಿದ್ದಾರೆ. ಶನಿವಾರ ಅಪಘಾತ ನಡೆದಿದ್ದು, ಬೇಕಲ ಠಾಣೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಶವಮಹಜರು ನಡೆಸಿದ ನಂತರ ಮೃತದೇಹ ಸಂಬಂಧಿಕರಿಗೆ ಬಿಟ್ಟುಕೊಡಲಾಯಿತು.