ಹಣಕಾಸು ಮತ್ತು ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮದಲ್ಲಿ ಗಿರೀಶ್ ಕೋಟ್ಯಾನ್, ಅರುಣ್ ಕುಮಾರ್, ಗೀತಾ ಯಶೋಧರ್, ಸಂಗೀತಾ ಎಸ್.ಕರ್ತಾ, ಸುನೀಲ್ ನಾಯ್ಕ, ನವೀನ್ ಚಂದ್ರ ಕರ್ಕೇರ ಮತ್ತಿತರರಿದ್ದರು.  
ದಕ್ಷಿಣ ಕನ್ನಡ

ಹಣಕಾಸು ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮ

ಯುವವಾಹಿನಿ ಮೂಡಬಿದಿರೆ ಘಟಕ, ವೀಚೀಸ್ ಕೌಶಲಪರ ತರಬೇತಿ ಕೇಂದ್ರದ ಸಹಯೋಗದಲ್ಲಿ ಹಣಕಾಸು ಮತ್ತು ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮವನ್ನು ಮೂಡಬಿದಿರೆ ಬಿಲ್ಲವ ಸಂಘದಲ್ಲಿ ಆಯೋಜಿಸಲಾಯಿತು.

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಯುವವಾಹಿನಿ ಮೂಡಬಿದಿರೆ ಘಟಕ, ವೀಚೀಸ್ ಕೌಶಲಪರ ತರಬೇತಿ ಕೇಂದ್ರದ ಸಹಯೋಗದಲ್ಲಿ ಹಣಕಾಸು ಮತ್ತು ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮವನ್ನು ಮೂಡಬಿದಿರೆ ಬಿಲ್ಲವ ಸಂಘದಲ್ಲಿ ಆಯೋಜಿಸಲಾಯಿತು.

ಯುವವಾಹಿನಿ ಮೂಡಬಿದಿರೆ ಘಟಕ ಅಧ್ಯಕ್ಷ ಗಿರೀಶ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ರಿಸರ್ವ್ ಬ್ಯಾಂಕ್, ಬೆಂಗಳೂರು, ಹಣಕಾಸು ಸೇರ್ಪಡೆ ಮತ್ತು ಅಭಿವೃದ್ಧಿ ವಿಭಾಗದ ಸಹಾಯಕ ಮಹಾ ಪ್ರಬಂಧಕ ಅರುಣ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ದಕ್ಷಿಣ ಕನ್ನಡ ಲೀಡ್ ಬ್ಯಾಂಕ್ ವ್ಯವಸ್ಥಾಪಕಿ ಗೀತಾ ಯಶೋಧರ್, ನಬಾರ್ಡ್ ಡಿಡಿಎಂ ಸಂಗೀತಾ ಎಸ್.ಕರ್ತಾ, ರುಡ್‌ಸೆಟ್ ನಿರ್ದೇಶಕ ಸುನೀಲ್ ನಾಯ್ಕ ಮುಖ್ಯ ಅತಿಥಿಗಳಾಗಿದ್ದರು. ಶುಭಲಕ್ಷ್ಮೀ, ಬಿಲ್ಲವ ಸಂಘ ಅಧ್ಯಕ್ಷ ನವೀನ್ ಚಂದ್ರ ಕರ್ಕೇರ ಉಪಸ್ಥಿತರಿದ್ದರು.

ಸುನೀಲ್ ನಾಯ್ಕ ಉಚಿತ ಸ್ವಯಂ ಉದ್ಯೋಗ, ಕೌಶಲಾಭಿವೃದ್ಧಿ ತರಬೇತಿ ಕುರಿತು ಮಾಹಿತಿ ನೀಡಿದರು. ಗೀತಾ ಯಶೋಧರ್ ಕೌಶಲಾಭಿವೃದ್ಧಿ ಮೂಲಕ ಸ್ವಂತ ಉದ್ಯಮ ಆರಂಭಿಸಿ, ಅರ್ಹರು ಸರ್ಕಾರದ ಯೋಜನೆಗಳಡಿ ಬ್ಯಾಂಕ್ ಸಾಲ ಸೌಲಭ್ಯ ಪಡೆಯುವಂತೆ ಸಲಹೆ ನೀಡಿದರು. ಸಂಗೀತಾ ಎಸ್.ಕರ್ತಾ ಸ್ವಸಹಾಯ ಸಂಘಗಳ ಸಾಲ, ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ಅರುಣ್ ಕುಮಾರ್ ಆರ್‌ಬಿಐ ಕಾರ್ಯವೈಖರಿ, ಗ್ರಾಹಕರ ರಕ್ಷಣೆ, ಆರ್‌ಬಿಐ ಇಂಟಿಗ್ರೇಟೆಡ್ ಒಂಬಡ್ಸ್‌ಮನ್ ಸ್ಕೀಮ್, ಪ್ರತಿ ಠೇವಣಿದಾರರಿಗೆ ಪ್ರತಿ ಬ್ಯಾಂಕ್‌ಗೆ ಗರಿಷ್ಠ 5 ಲಕ್ಷ ರೂ.ವರೆಗೆ ಇರುವ ಠೇವಣಿ ವಿಮಾ ರಕ್ಷಣೆ ಕುರಿತು ಅರಿವು ಮೂಡಿಸಿದರು. ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕ ಲತೇಶ್ ಬಿ. ಉಳಿತಾಯ, ಡಿಜಿಟಲ್ ಬ್ಯಾಂಕಿಂಗ್, ಸುರಕ್ಷಿತ ಡಿಜಿಟಲ್ ವ್ಯವಹಾರ, ಸಾಮಾಜಿಕ ಭದ್ರತಾ ಯೋಜನೆ ಕುರಿತು ಮಾಹಿತಿ ನೀಡಿದರು. ಶ್ವೇತಾ ಜೈನ್ ನಿರೂಪಿಸಿದರು.