ರೈತರ ದಿನಾಚರಣೆ, ಕೃಷಿ ಗೋಷ್ಠಿ, ಸವಲತ್ತು ವಿತರಣೆ ಕಾರ್ಯಕ್ರಮದಲ್ಲಿ ಕೆ.ಜಯಪ್ರಕಾಶ್, ವಿನಯಚಂದ್ರ ಪಿ.ಕೆ., ಕೆ.ಅನಂತ ಬೋರ್ಕರ್, ಅಲೆಕ್ಸ್ ವರ್ಗೀಸ್, ಪ್ರವೀಣ್ ಚೆನ್ನಾವರ, ಚಿದಾನಂದ ಶೆಟ್ಟಿ ಕೆ., ಮೋನಪ್ಪ ಗೌಡ ಅವರಿಗೆ ಶ್ರೇಷ್ಠ ಕೃಷಿಕ ಪುರಸ್ಕಾರ ಪ್ರದಾನಿಸಲಾಯಿತು.
- ಅಶೋಕ್ ಕುಮಾರ್ ರೈ ಆಶಯ
- ರೈತರ ದಿನಾಚರಣೆ, ಕೃಷಿಗೋಷ್ಠಿ
ಪುತ್ತೂರು: ಕೃಷಿಯಲ್ಲಿ ಬದಲಾವಣೆ ತಂದಾಗ ಮಾತ್ರ ರೈತರು ಬದುಕಲು ಸಾಧ್ಯ. ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಸುವ ಜತೆಗೆ ಆಧುನಿಕತೆಯನ್ನು ಜೋಡಿಸುವ ಕಾರ್ಯವಾಗಬೇಕು. ಸರ್ಕಾರದ ಸವಲತ್ತುಗಳನ್ನು ರೈತರಿಗೆ ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನ ಅಧಿಕಾರಿಗಳಿಂದ ನಡೆಯುತ್ತಿದೆ ಎಂದು ಶಾಸಕ ಅಶೋಕ್‌ಕುಮಾರ್ ರೈ ಹೇಳಿದರು.
ದರ್ಬೆ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಕೃಷಿ ಇಲಾಖೆ ಪುತ್ತೂರು, ಕೃಷಿಕ ಸಮಾಜ, ಆತ್ಮ ಯೋಜನೆ ಹಾಗೂ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಸಹಯೋಗದಲ್ಲಿ ರೈತರ ದಿನಾಚರಣೆ, ಕೃಷಿಗೋಷ್ಠಿ, ಸವಲತ್ತು ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಿಪಿಸಿಆರ್‌ಐ ವಿಜ್ಞಾನಿ ಡಾ.ನಾಗರಾಜ್ ತಾಂತ್ರಿಕ ಮಾಹಿತಿ ನೀಡಿದರು. ಕೃಷಿ ಭಾಗ್ಯ ಯೋಜನೆಯ ಕೃಷಿಕರಿಗೆ, ತುಂತುರು ನೀರಾವರಿ ಘಟಕದ ಹಾಗೂ ಕೃಷಿ ಯಂತ್ರೋಪಕರಣದ ಫಲಾನುಭವಿಗಳಿಗೆ ಸಹಾಯಧನ ವಿತರಿಸಲಾಯಿತು.
ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ವಿಜಯ ಕುಮಾರ್ ರೈ ಅಧ್ಯಕ್ಷತೆ ವಹಿಸಿದ್ದರು. ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಅಮಲ ರಾಮಚಂದ್ರ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ, ಕಡಬ ತಾಲೂಕು ಕೃಷಿಕ ಸಮಾಜ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ ಮತ್ತಿತರರು ಉಪಸ್ಥಿತರಿದ್ದರು.
ಸಹಾಯಕ ಕೃಷಿ ನಿರ್ದೇಶಕ ಟಿ.ಜಿ.ಚೆಲುವರಂಗಪ್ಪ ಸ್ವಾಗತಿಸಿದರು. ಉಪ ಕೃಷಿ ನಿರ್ದೇಶಕ ಶಿವಶಂಕರ ಎಚ್.ದಾನೋಗೊಂಡರ ಪ್ರಸ್ತಾವನೆಗೈದರು. ಯಶಸ್ ಮಂಜುನಾಥ್ ವಂದಿಸಿದರು.
ಶ್ರೇಷ್ಠ ಕೃಷಿಕ ಪುರಸ್ಕಾರ:
೨೦೨೩-೨೪ನೇ ಸಾಲಿನಲ್ಲಿ ಕೇಶವ ಭಂಡಾರಿ, ತಾರಾ ಬಲ್ಲಾಳ್, ಭಾಸ್ಕರ್ ಬಲ್ಲಾಳ್, ರಾಮ ನಾಯ್ಕ, ಎಚ್.ಸುಂದರ ಗೌಡ, ವಾಮನ ಮಡಿವಾಳ, ನಾರಾಯಣ ಗೌಡ, ೨೦೨೪-೨೫ನೇ ಸಾಲಿನಲ್ಲಿ ಕೆ.ಜಯಪ್ರಕಾಶ್, ವಿನಯಚಂದ್ರ ಪಿ.ಕೆ., ಕೆ.ಅನಂತ ಬೋರ್ಕರ್, ಅಲೆಕ್ಸ್ ವರ್ಗೀಸ್, ಪ್ರವೀಣ್ ಚೆನ್ನಾವರ, ಚಿದಾನಂದ ಶೆಟ್ಟಿ ಕೆ., ಮೋನಪ್ಪ ಗೌಡ ಅವರಿಗ ಶ್ರೇಷ್ಠ ಕೃಷಿಕ ಪುರಸ್ಕಾರ ಪ್ರದಾನ ಮಾಡಲಾಯಿತು.
ಕೃಷಿಯಲ್ಲಿ ಅನ್ವೇಷಣೆಯಾಗಬೇಕಾಗಿದೆ. ಅಡಕೆ ಜತೆಗೆ ಪರ್ಯಾಯ ಬೆಳೆ ಬೆಳೆಯಬೇಕು. ಸರ್ಕಾರದ ಸವಲತ್ತು ಪಡೆದುಕೊಂಡು, ಕೃಷಿಯಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು. ರೈತರು ಗಟ್ಟಿಯಿದ್ದಾಗ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸಾಧ್ಯ. ಮಕ್ಕಳಿಗೆ ವಿವಿಧ ಆಹಾರದ ಜತೆಗೆ ಜೇನು ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ.