ಗುರುಪುರ: ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಕುಪ್ಪೆಪದವು ಶಾಖಾ ವ್ಯವಸ್ಥಾಪಕ ಜಯಾನಂದ ಅವರಿಗೆ ಶನಿವಾರ ಬೀಳ್ಕೊಡುಗೆ ಸಮಾರಂಭ ನಡೆಯಿತು.
ನಾರಾಯಣಗುರು ಬಿಲ್ಲವ ಸೇವಾ ಸಮಿತಿ ಅಧ್ಯಕ್ಷ ರಾಮಚಂದ್ರ ತಾಳಿಪಾಡಿ, ನಾರಾಯಣಗುರು ಬಿಲ್ಲವ ಯುವ ವೇದಿಕೆ ಅಧ್ಯಕ್ಷ ಶೇಖರ್ ನೇಲಚ್ಚಿಲ್, ಉದ್ಯಮಿ ಅಜಿತ್ ಕುಮಾರ್ ಜೈನ್, ಮುತ್ತೂರು ಗ್ರಾಪಂ ಸದಸ್ಯ ಸತೀಶ್ ಪೂಜಾರಿ, ಉದ್ಯಮಿಗಳಾದ ಜಗದೀಶ ಕುಲಾಲ್ ಪಾಕಜೆ, ವಿನೋದ್ ಕುಮಾರ್, ಸತೀಶ್ ಚಂದ್ರಮಜಲ್ ಅವರು ಸಿದ್ಧಕಟ್ಟೆ ಶಾಖೆಗೆ ವರ್ಗಾವಣೆಗೊಂಡಿರುವ ಜಯಾನಂದ ಕಾರ್ಯದಕ್ಷತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಖೆ ನೂತನ ವ್ಯವಸ್ಥಾಪಕ ಪ್ರವೀಣ್, ಬಿಜೆಪಿ ಎಡಪದವು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮಹಾಬಲ ಸಾಲ್ಯಾನ್, ಯಾದವ ಮೆಸ್ಕಾಂ, ಯಕ್ಷಗಾನ ಕಲಾವಿದ ಪ್ರಸಾದ್ ಶೆಟ್ಟಿ ಕುಟ್ಟೆಚ್ಚಾರ್, ಚಂದ್ರಶೇಖರ ತುಂಬೆಮಜಲ್, ಗ್ರಾಹಕರು, ಸಿಬ್ಬಂದಿ ಇದ್ದರು. ಯಕ್ಷಗಾನ ಕಲಾವಿದ ವಿಶ್ವನಾಥ ಪಂಜ ನಿರೂಪಿಸಿ, ವಿನೋದ್ ಕುಮಾರ್ ಸ್ವಾಗತಿಸಿ, ವಂದಿಸಿದರು.