ಎಕ್ಸೆಲ್ ವಿದ್ಯಾಸಂಸ್ಥೆಯಲ್ಲಿ ನಡೆದ ಕಾಲೇಜು ವಾರ್ಷಿಕೋತ್ಸವದಲ್ಲಿ ಪದ್ಮಶ್ರೀ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ ಅವರನ್ನು ಗೌರವಿಸಲಾಯಿತು. 
ದಕ್ಷಿಣ ಕನ್ನಡ

ನಿಯಮಿತ ಅಭ್ಯಾಸದಿಂದ ಗುರಿ ಸಾಧನೆ : ಡಾ.ರಾಹುಲ್ ದೇವರಾಜ್ ಪ್ರತಿಪಾದನೆ

ಸೌಮ್ಯ ಆರ್
"

ಮಕ್ಕಳು ಶಿಕ್ಷಣ ಪಡೆದು ಸ್ವತಂತ್ರರಾದ ಬಳಿಕ ತಂದೆ ತಾಯಿಯರನ್ನು ಆಶ್ರಮಕ್ಕೆ ತಳ್ಳದೆ ಅವರ ಬಯಕೆಯಂತೆ ಅವರನ್ನು ಖುಷಿಯಲ್ಲಿಡಬೇಕು. ಕೃಷಿ ಪರಂಪರೆಯಿಂದ ವಿಮುಖರಾಗದೆ ಮಣ್ಣಿನ ಸಂಸ್ಕೃತಿ ಉಳಿಸಬೇಕು. ನೀರಿನ ಮಿತವ್ಯಯ ಹಾಗೂ ಜಲಮರುಪೂರಣದ ಬಗ್ಗೆ ಸಾಕಷ್ಟು ಕಾಳಜಿ ವಹಿಸಬೇಕು.

"

ಪ್ರಯತ್ನ ಮತ್ತು ಇಟ್ಟ ಗುರಿಯತ್ತ ನಂಬಿಕೆಯಿಂದ ನಡೆದರೆ ಯಶಸ್ಸು ಸಾಧ್ಯ. ಸ್ವಸಾಮರ್ಥ್ಯದ ಬಗ್ಗೆ ನಾವೇ ಸಂಶಯಪಟ್ಟುಕೊಂಡರೆ ಮುಂದಿರುವ ಎಲ್ಲ ದಾರಿಗಳು ಮುಚ್ಚಿಕೊಳ್ಳುತ್ತವೆ. ವಿದ್ಯಾರ್ಥಿಗಳು ತಮ್ಮ ಆಲೋಚನೆಗಳನ್ನು ಬಹಿರಂಗಗೊಳಿಸದೆ ಗುರಿಯೆಡೆಗೆ ಸಾಗಬೇಕು. ತರಗತಿಯಲ್ಲಿ ಒಬ್ಬನೇ ಶಿಕ್ಷಕ ಒಂದೇ ಪಠ್ಯವನ್ನು ಬೋಧಿಸುವುದಾದರೂ ವಿದ್ಯಾರ್ಥಿಗಳು ಬೇರೆಯದೇ ಫಲಿತಾಂಶ ಪಡೆಯುತ್ತಾರೆ. ಆದ್ದರಿಂದ ನಿಮ್ಮ ಆಲೋಚನಾ ಶಕ್ತಿ, ಗ್ರಹಿಕೆ, ಸ್ಮಾರ್ಟ್ ವರ್ಕ್ ಮೂಲಕ ಕಲಿಕಾ ವಿಧಾನವನ್ನು ಸರಳೀಕರಿಸಿಕೊಳ್ಳಬೇಕು.