ED 
ದಕ್ಷಿಣ ಕನ್ನಡ

ಕಾಸರಗೋಡಿನಲ್ಲೂ ಇಡಿ ಕಾರ್ಯಾಚರಣೆ

ಚಿನ್ನ ಕಳ್ಳಸಾಗಣೆ, ಹವಾಲಾ ಸಂಬಂಧ ತನಿಖೆ

ಕುಂಬಳೆ: ಚಿನ್ನ ಕಳ್ಳಸಾಗಣೆ ಮತ್ತು ಹವಾಲಾ ವ್ಯವಹಾರಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶುಕ್ರವಾರ ಕಾಸರಗೋಡು ಸೇರಿದಂತೆ ಕೋಯಿಕ್ಕೋಡ್, ಕಣ್ಣೂರು ಮತ್ತು ತಿರುವನಂತಪುರಂ ಜಿಲ್ಲೆಗಳ ವಿವಿಧೆಡೆ ವ್ಯಾಪಕ ದಾಳಿ ನಡೆಸಿದ್ದಾರೆ.

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ(ಫೆಮಾ) ಉಲ್ಲಂಘನೆಗೆ ಸಂಬಂಧಿಸಿ ಹವಾಲಾ ಮಾರ್ಗದ ಮೂಲಕ ಅಕ್ರಮವಾಗಿ ಹಣ ಸಾಗಿಸುವ ಪ್ರಮುಖ ಸೂತ್ರಧಾರರು ಹಾಗೂ ಚಿನ್ನ ಕಳ್ಳಸಾಗಣೆಗೆ ಆರ್ಥಿಕ ನೆರವು ನೀಡುವವರನ್ನು ಗುರಿಯಾಗಿಸಿ ಕಾರ್ಯಾಚರಣೆ ಕೈಗೊಂಡಿದೆ.

ಶಂಕಿತರ ಮನೆ, ಕಚೇರಿ ಹಾಗೂ ಸಂಬಂಧಪಟ್ಟ ಇತರ ಕೇಂದ್ರಗಳಲ್ಲಿ ಏಕಕಾಲದಲ್ಲಿ ಶೋಧ ಕಾರ್ಯ ಮುಂದುವರಿದಿದೆ. ಮಹತ್ವದ ದಾಖಲೆಗಳು ಮತ್ತು ಡಿಜಿಟಲ್ ಸಾಕ್ಷ್ಯಗಳನ್ನು ಕಲೆಹಾಕಲು ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದಾರೆ.