ಸಾಂದರ್ಭಿಕ ಚಿತ್ರ 
ದಕ್ಷಿಣ ಕನ್ನಡ

ವಸತಿಗೃಹದಲ್ಲಿ ಮಾದಕವಸ್ತು ಪಾನ ಪಾರ್ಟಿ : ಮೂವರ ಬಂಧನ

ಕಾಸರಗೋಡು: ಕುಂಬಳೆಯ ವಸತಿಗೃಹವೊಂದರಲ್ಲಿ ಮಾದಕವಸ್ತು ಸೇವನೆಯಲ್ಲಿ ತೊಡಗಿಸಿಕೊಂಡಿದ್ದ ಮೂವರನ್ನು ಕುಂಬಳೆ ಅಬಕಾರಿ ದಳ ಸಿಬ್ಬಂದಿ ಬಂಧಿಸಿದ್ದಾರೆ.
ಕುಂಬಳೆ ಶ್ರೀ ನಿತ್ಯಾನಂದ ಮಠ ಸನಿಹದ ನಿವಾಸಿ ಸಿ.ಕೆ.ಕೇತನ್, ಕುಂಟಂಗೇರಡ್ಕ ನಿವಾಸಿ ಅಬ್ದುಲ್ ನಿಸಾರ್, ಈಶ್ವರಮಂಗಲ ಗಾಳಿಮುಖ ನಿವಾಸಿ ಬ್ರಿಜೇಶ್ ಬಂಧಿತರು. ಕುಂಬಳೆ ರೈಲ್ವೆ ನಿಲ್ದಾಣ ಸನಿಹದ ವಸತಿಗೃಹವೊಂದರಲ್ಲಿ ಮಾದಕವಸ್ತು ಸೇವನೆಯಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಮಾಹಿತಿ ಪಡೆದ ಅಬಕಾರಿ ದಳ ಕುಂಬಳೆ ರೇಂಜ್ ಇನ್‌ಸ್ಪೆಕ್ಟರ್ ಕೆ.ವಿ.ಶ್ರಾವಣ್ ನೇತೃತ್ವದ ತಂಡ ಬುಧವಾರ ತಡರಾತ್ರಿ ಕಾರ್ಯಾಚರಣೆ ನಡೆಸಿದೆ. ಇವರು ಸಂಚಾರಕ್ಕೆ ಬಳಸಿದ್ದ ಸ್ಕೂಟರ್‌ನಲ್ಲಿ ದಾಸ್ತಾನಿರಿಸಿದ್ದ 2.272ಗ್ರಾಂ ಮೆಥಾಫಿಟಮಿನ್ ಮಾದಕವಸ್ತು, ಸ್ಕೂಟರ್ ವಶಪಡಿಸಕೊಳ್ಳಲಾಗಿದೆ.