ಆರ್.ಕೆ.ನಾಯರ್ 
ದಕ್ಷಿಣ ಕನ್ನಡ

ವಂದನಾ ಪ್ರಶಸ್ತಿಗೆ ಡಾ.ಆರ್.ಕೆ. ನಾಯರ್ ಆಯ್ಕೆ

ಮಂಗಳೂರು: ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮತ್ತು ರೋಟರ‌್ಯಾಕ್ಟ್ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಯ ಆಶ್ರಯದಲ್ಲಿ ವಾರ್ಷಿಕ ರಾಜ್ಯಮಟ್ಟದ ವಂದನಾ ಪ್ರಶಸ್ತಿ-2026ಗೆ ಕಾಸರಗೋಡಿನ ಹಸಿರು ಕ್ರಾಂತಿಕಾರ ಡಾ.ಆರ್.ಕೆ.ನಾಯರ್ ಆಯ್ಕೆಯಾಗಿದ್ದಾರೆ ಎಂದು ರೋಟರಿ ಸಂಸ್ಥೆಯ ಅಧ್ಯಕ್ಷ ಭಾಸ್ಕರ ರೈ ಕಟ್ಟ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಪ್ರಶಸ್ತಿಯಲ್ಲಿ ಲಕ, ಪ್ರಮಾಣ ಪತ್ರ, ಸ್ಮರಣಿಕೆ ಒಳಗೊಂಡಿದ್ದು, ಮಾ.21ರಂದು ನಗರದ ಸೀ ವ್ಯೆವ್ ಹೋಟೆಲ್‌ನಲ್ಲಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಹಾಗೂ ಇತರ ರೋಟರಿ ಗಣ್ಯರ ಸಮ್ಮುಖದಲ್ಲಿ ಪ್ರದಾನ ಮಾಡಲಾಗುವುದು ಎಂದರು.
ಆರ್.ಕೆ.ನಾಯರ್ ಅವರು ದೇಶದ 12 ರಾಜ್ಯಗಳಲ್ಲಿ ಸಾವಿರಾರು ಎಕ್ರೆ ಬಂಜರು ಭೂಮಿಯನ್ನು ಜಪಾನ್ ರಾಷ್ಟ್ರ ಮಾದರಿಯ ಮಿಯಾವಾಕಿ ಅರಣ್ಯ ಪ್ರದೇಶವಾಗಿ ಪರಿವರ್ತಿಸಿದ್ದನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದರು.
ರೋಟರಿ ಸಂಸ್ಥೆಯ ಪ್ರಮುಖರಾದ ಡಾ.ದೇವದಾಸ್ ರೈ, ವಿಕಾಸ್ ಕೋಟ್ಯಾನ್, ಅಕ್ಷಯ್ ಬಿ. ರೈ, ಎಂ.ವಿ. ಮಲ್ಯ ಮೊದಲಾದವರು ಉಪಸ್ಥಿತರಿದ್ದರು.